Mysore
28
overcast clouds

Social Media

ಗುರುವಾರ, 18 ಜೂನ್ 2026
Light
Dark

ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾಗೆ ಬಿಗ್‌ ರಿಲೀಫ್

ನವದೆಹಲಿ: ದೆಹಲಿಯ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಾಗೂ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರನ್ನು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಲಯವು ದೋಷಮುಕ್ತಗೊಳಿಸಿದೆ.

ಕೇಜ್ರಿವಾಲ್‌ ವಿರುದ್ಧದ ಸಾಕ್ಷ್ಯಾಧಾರಗಳ ಕೊರತೆಯನ್ನು ಎತ್ತಿ ತೋರಿಸಿದ ನ್ಯಾಯಾಲಯವು ಗಂಭೀರವಾದ ಆರೋಪಗಳನ್ನು ಮಾಡುವಾಗ ಅವುಗಳಿಗೆ ಪೂರಕವಾದ ಭೌತಿಕ ಪುರಾವೆಗಳಿರಬೇಕು. ಯಾವುದೇ ಸಾಕ್ಷ್ಯವಿಲ್ಲದೇ ಕೇವಲ ಸಂಚಿನ ಕೇಂದ್ರ ಬಿಂದು ಎಂದು ಆರೋಪಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.

ಪ್ರಾಸಿಕ್ಯೂಷನ್‌ನ ಆರೋಪಗಳು ಸಾಕ್ಷ್ಯಾಧಾರಗಳಿಲ್ಲದೇ ಹೋದರೆ ಅದು ಸಾರ್ವಜನಿಕ ಕಚೇರಿಯ ಮೇಲಿನ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಗಮನಿಸಿದೆ.

ಮನೀಶ್‌ ಸಿಸೋಡಿಯಾ ಅವರನ್ನು ಬಿಡುಗಡೆ ಮಾಡಿದ ನ್ಯಾಯಾಲಯವು ಪ್ರಾಸಿಕ್ಯೂಷನ್‌ ಮಂಡಿಸಿದ ವಾದವು ನ್ಯಾಯಾಂಗ ಪರಿಶೀಲನೆಯಲ್ಲಿ ಸೋತಿದೆ ಎಂದು ತಿಳಿಸಿದೆ.

 

Tags:
error: Content is protected !!