Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ವಿಧಾನಸೌಧದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಂತಿದೆ: ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು: ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಂತಿದೆ. ಸರ್ವಾಧಿಕಾರಿ ಮನಸ್ಥಿತಿ ಕಾಂಗ್ರೆಸ್ಸಿಗರ ಡಿಎನ್‌ಎಯಲ್ಲಿ ಬಂದಿದೆ. ಮಾಧ್ಯಮದವರು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ.

ಕಾಂಗ್ರೆಸ್‌ ಸರ್ಕಾರದಿಂದ ಕರಾಳ ದಿನ ಆಗಿದೆ. ಜೆಡಿಎಸ್‌ ಮತ್ತು ಏಳು ಕೋಟಿ ಕನ್ನಡಿಗರು ಪತ್ರಕರ್ತರ ಜೊತೆಗಿದ್ದಾರೆ ಎಂದು ಹೇಳಿದರು.

Tags:
error: Content is protected !!