Mysore
24
scattered clouds

Social Media

ಭಾನುವಾರ, 26 ಏಪ್ರಿಲ 2026
Light
Dark

ಓದುಗರ ಪತ್ರ | ಹಟ್ಟಿ ಮಾರಮ್ಮ ದೇವಾಲಯಕ್ಕೆ ಸುತ್ತುಗೋಡೆ ನಿರ್ಮಿಸಿ

dgp murder case

ನಂಜನಗೂಡು ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಹಟ್ಟಿ ಮಾರಮ್ಮ ದೇವಾಲಯದಲ್ಲಿ ಪ್ರತಿ ವರ್ಷ ಫೆಬ್ರವರಿ/ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ಕೊಂಡೋತ್ಸವ, ಜಾತ್ರೆ ನಡೆಯುತ್ತದೆ. ಈ ದೇಗುಲಕ್ಕೆ ಅಕ್ಕ ಪಕ್ಕದ ಜಿಲ್ಲೆ ಹಾಗೂ ನೆರೆಯ ತಮಿಳುನಾಡು ರಾಜ್ಯದಿಂದhಲೂ ಭಕ್ತಾದಿಗಳು ಬರುತ್ತಾರೆ.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಕೇಂದ್ರ ಬಸ್ ನಿಲ್ದಾಣ, ಅಂಬೇಡ್ಕ‌ ಸರ್ಕಲ್‌, ಆಸು ಪಾಸಿನಲ್ಲೇ ಈ ದೇವಸ್ಥಾನ ಇದ್ದು, ಜನನಿಬಿಡ ಸ್ಥಳವಾಗಿದೆ. ದೇವಾಲಯಕ್ಕೆ ಸುತ್ತುಗೋಡೆ ನಿರ್ಮಿಸದೇ ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯಿರುತ್ತದೆ. ದೇವಾಲಯಕ್ಕೆ ಸುತ್ತುಗೋಡೆ ನಿರ್ಮಿಸುವಂತೆ ನಗರಸಭೆ ಹಾಗೂ ಶಾಸಕರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಕೂಡಲೇ ದೇವಾಲಯಕ್ಕೆ ಸುತ್ತುಗೋಡೆ ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.
-ಅನಿಲ್ ಕುಮಾರ್, ನಂಜನಗೂಡು

 

Tags:
error: Content is protected !!