Mysore
21
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಕುರಟ್ಟಿ ಹೊಸೂರಲ್ಲಿ ಪ್ರಕೃತಿ ವಿಸ್ಮಯ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ ಕಂಡು ಜನರು ಅಚ್ಚರಿ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು 

ಹನೂರು: ಕಡು ಕಹಿ ಎಲೆ, ಕಾಂಡ, ಕಾಯಿ ನೀಡುವ ಬೇವಿನ ಮರದಲ್ಲಿ ಸಿಹಿ ದ್ರಾವಣ ಉತ್ಪತ್ತಿಯಾಗಿ ಹರಿಯುತ್ತಿರುವ ಘಟನೆ ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರಲ್ಲಿ ನಡೆದಿದೆ.

ಕುರಟ್ಟಿ ಹೊಸೂರಿನ ಮುನಿಸಿದ್ದ ಎಂಬವವರ ಜಮೀನಿನಲ್ಲಿ ಬೆಳೆದಿರುವ ಸುಮಾರು 15 ವರ್ಷದ ಬೇವಿನ ಮರದಲ್ಲಿ ಈ ವಿಸ್ಮಯ ಕಂಡುಬಂದಿದ್ದು, ಹಾಲಿನಂತೆ ಬಣ್ಣದ ನೀರು ಬೇವಿನ ಮರದ ಮೂರ್ನಾಲ್ಕು ಕಡೆಯಿಂದ ಜಿನಗುತ್ತಿದೆ. ಬಿಳಿ ಬಣ್ಣದ ದ್ರಾವಣವನ್ನ ಸೇವಿಸಿ ಸಿಹಿ ಜೇನಿನಂತೆ ರುಚಿ ಇರುವುದನ್ನು ತಿಳಿದು ಕುರಟ್ಟಿ ಹೊಸೂರು ಗ್ರಾಮಸ್ಥರು ಅಚ್ಚರಿಪಟ್ಟಿದ್ದಾರೆ.

ಬೇವಿನ ಮರ ಕಹಿ ಆದ್ರೆ ಆ ಮರದಿಂದ ಬರುತ್ತಿರುವ ದ್ರಾವಣ ಸಕ್ಕರೆಯಷ್ಟೇ ಸಿಹಿಯಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಈ ಬೇವಿನ ಮರ ನಮ್ಮ ಜಮೀನಿನಲ್ಲಿ ಬೆಳೆದು ಸುಮಾರು 15 ವರ್ಷಗಳು ಕಳೆದಿದೆ. ಕಳೆದ ನಾಲ್ಕು ದಿನಗಳಿಂದ ಬಿಳಿ ಬಣ್ಣದ ದ್ರಾವಣ ಹರಿಯುತ್ತಿದ್ದು, ಇದನ್ನು ಸವಿದು ನೋಡಿದಾಗ ಸಿಹಿ ಇರುವುದು ಕಂಡು ಬಂದಿದೆ. ಬೇವಿನ ಮರ ಸಂಪೂರ್ಣ ಕಹಿಯಾಗಿದ್ದರೂ, ಬಿಳಿ ದ್ರಾವಣ ಸಿಹಿಯಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಮಾಲೀಕ ಮುನಿಸಿದ್ದ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.

Tags:
error: Content is protected !!