Mysore
36
few clouds

Social Media

ಬುಧವಾರ, 22 ಏಪ್ರಿಲ 2026
Light
Dark

ಲೋಕಸಭೆಯಲ್ಲಿ ಸ್ಪೀಕರ್‌ ಮೇಲೆ ಪೇಪರ್‌ ತೂರಿದ್ದ 8 ಮಂದಿ ಸಂಸದರು ಅಮಾನತು

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಉಂಟಾದ ಭಾರೀ ಗದ್ದಲ ಮತ್ತು ಸ್ಪೀಕರ್‌ ಪೀಠದ ಕಡೆಗೆ ಪೇಪರ್‌ ಹರಿದು ಎಸೆದ ಘಟನೆಗೆ ಸಂಬಂಧಿಸಿದಂತೆ 8 ಮಂದಿ ಪ್ರತಿಪಕ್ಷದ ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.

ಮಾಣಿಕ್ಯ ಟ್ಯಾಗೋರ್‌, ಗುರ್ಜೀತಾ ಓಜ್ಲಾ, ರಾಣಾ ವಾರಿಂಗ್‌, ಇಬಿ ಈಡನ್‌, ಕಿರಣ್‌ ರೆಡ್ಡಿ, ವೆಂಕಟ ರಾಮನ್‌, ಅಮರಿಂದರ್‌ ಸಿಂಗ್‌, ಕಿರಣ್‌ ಕುಮಾರ್‌ ರೆಡ್ಡಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಘಟನೆ ಹಿನ್ನೆಲೆ: ಬಜೆಟ್‌ ಅಧಿವೇಶನದ ಕಲಾಪದ ವೇಳೆ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದವು. ಈ ಹಂತದಲ್ಲಿ ಸಂಸದರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದ್ದಲ್ಲದೇ, ಕೈಯಲ್ಲಿದ್ದ ಪೇಪರ್‌ಗಳನ್ನು ಹರಿದು ಸ್ಪೀಕರ್‌ ಪೀಠದ ಕಡೆಗೆ ತೂರಿದ್ದಾರೆ. ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸಭಾಧ್ಯಕ್ಷರು ಸಂಸದರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

 

Tags:
error: Content is protected !!