Mysore
34
scattered clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ರಸ್ತೆ ಮಧ್ಯೆ ಪುಂಡರ ವ್ಹೀಲಿಂಗ್:‌ ವಿಡಿಯೋ ವೈರಲ್‌

ಹಾಸನ: ಪುಂಡರಿಬ್ಬರು ವ್ಹೀಲಿಂಗ್‌ ಮಾಡಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮುದುಡಿ ರಸ್ತೆಯಲ್ಲಿ ನಡೆದಿದೆ.

ಬೈಕ್‌ನಲ್ಲಿ ವ್ಹೀಲಿಂಗ್ ಮಾಡುತ್ತಲೇ ಬೈಕ್‌ನಲ್ಲಿ ಇಬ್ಬರು ಯುವಕರು ತೆರಳಿದ್ದಾರೆ. ಒಂದೇ ಚಕ್ರದಲ್ಲಿ ಬೈಕ್‌ ಓಡಿಸಿದ್ದು, ಇನ್ನೋರ್ವ ಹೆದರದೇ ಹಿಂಬದಿಯಲ್ಲಿ ಕುಳಿತಿದ್ದಾನೆ. ವ್ಹೀಲಿಂಗ್‌ ಮಾಡುವಾಗ ನಾಯಿ ಅಡ್ಡ ಬಂದಿದ್ದು, ಕೂದಲೆಳೆ ಅಂತರದಲ್ಲಿ ಅನಾಹುತವೊಂದು ತಪ್ಪಿದಂತಾಗಿದೆ.

ಬೈಕ್‌ಗೆ ನಾಯಿ ಅಡ್ಡ ಬಂದ ಕೂಡಲೇ ಕಾರು ಚಾಲಕ ಅಪಘಾತ ತಪ್ಪಿಸಲು ತಕ್ಷಣವೇ ಕಾರನ್ನು ನಿಲ್ಲಿಸಿದ್ದಾನೆ. ವ್ಹೀಲಿಂಗ್‌ ಮಾಡುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈ ಸಂಬಂಧ ಗಂಡಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tags:
error: Content is protected !!