ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ ತಾಲ್ಲೂಕಿನ ಆಲನಹಳ್ಳಿ ನಿವಾಸಿ ಗಣಪತ್ ಲಾಲ್ ಎಂಬವರನ್ನು ಗುರುವಾರ ಬಂಧಿಸಿದೆ.
ರಾಜಸ್ಥಾನದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿರುವ ನಾಲ್ವರಲ್ಲಿ ಮನೋಹರ್ ಬಿಷ್ಣೋಯಿ ಎಂಬಾತನ ಸಂಬಂಧಿಕನಾಗಿರುವುದರಿಂದ, ಗಣಪತಲಾಲ್‌ನನ್ನು ಅಲ್ಲಿಗೆ ಕರೆದೊಯ್ಯಲು ಅಧಿಕಾರಿಗಳು ಮೂರನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಟ್ರಾವೆಲ್ ವಾರಂಟ್ ಪಡೆದಿದ್ದಾರೆ.
ನಗರದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಗಣಪತ್‌ಲಾಲ್ ಮಾಲೀಕತ್ವದ ‘ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಮ್ಯಾನಿಫ್ಯಾಕ್ಚರಿಂಗ್ ಘಟಕದಲ್ಲಿ ಮಾದಕ ವಸ್ತು ತಯಾರಿಸಿ, ರಾಜಸ್ಥಾನ ದಲ್ಲಿ ಮಾರಲಾಗುತ್ತಿತ್ತು ಎಂಬ ಮಾಹಿತಿ ಎನ್‌ಸಿಬಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.
ಇನ್ನು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ, ಆರೋಪಿಯ ಮನೆ ಹಾಗೂ ಘಟಕಕ್ಕೆ ದೆಹಲಿ ಹಾಗೂ ಬೆಂಗಳೂರಿನ ಎನ್‌ಸಿಬಿ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿ, ತೀವ್ರ ವಿಚಾರಣೆಗೊಳಪಡಿಸಿದ್ದರು.





