ಮೈಸೂರು: ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ.ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022 ರಲ್ಲಿ ಸ್ಥಾಪಿಸಿರುವ ‘ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ ಗೆ ಲೇಖಕಿಯರಿಂದ ಕಥಾ ಸಂಕಲನಗಳನ್ನು ಆಹ್ವಾನಿಸಿದೆ.
2022 ರಿಂದ 2025ರ ಅವಧಿಯಲ್ಲಿ ಪ್ರಥಮ ಮುದ್ರಣ ಕಂಡ ಕಥಾ ಸಂಕಲನಗಳನ್ನು ಮಾತ್ರ ಪರಿಗಣಿಸಲಾಗುವುದು. ಪ್ರಶಸ್ತಿ 25,000 ರೂ. ನಗದು, ಫಲಕವನ್ನು ಒಳಗೊಂಡಿದ್ದು, ಜೂ.1ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.
ಆಸಕ್ತ ಪ್ರಕಾಶಕರು ಅಥವಾ ಲೇಖಕಿಯರು ಸಂಕಲನದ ನಾಲ್ಕು ಪ್ರತಿಗಳನ್ನು ಫೆಬ್ರವರಿ 29ರೊಳಗೆ ಕಳುಹಿಸುವಂತೆ ಕೋರಲಾಗಿದೆ.
ವಿಳಾಸ: ಎಂ.ಎಸ್.ವೇದಾ, ಅಲಂಪು, ನಂಬರ್:1257, ಪಡುವಣ ರಸ್ತೆ, 4ನೇ ತಿರುವು, ಟಿ.ಕೆ.ಬಡಾವಣೆ, 4ನೇ ಹಂತ, ಕುವೆಂಪುನಗರ, ಮೈಸೂರು-570023. ಮೊ:9481814836





