Mysore
20
overcast clouds

Social Media

ಬುಧವಾರ, 28 ಜನವರಿ 2026
Light
Dark

ರಾಜ್ಯಪಾಲರ ವಿರುದ್ಧ ರಾಜ್ಯ ಸರ್ಕಾರ ನಡೆದುಕೊಂಡ ಕ್ರಮ ಸರಿಯಲ್ಲ: ಮಾಜಿ ಮೇಯರ್‌ ಶಿವಕುಮಾರ್‌

ಮೈಸೂರು: ವಿಧಾನಮಂಡಲ ಜಂಟಿ ಅಧಿವೇಶನದ ದಿನದಂದು ರಾಜ್ಯಪಾಲರ ವಿರುದ್ಧ ರಾಜ್ಯ ಕಾಂಗ್ರೆಸ್‌ ಸರ್ಕಾರ ನಡೆದುಕೊಂಡ ಕ್ರಮ ಕರ್ನಾಟಕದ ಇತಿಹಾಸದಲ್ಲೇ ನಡೆದ ಕರಾಳ ದಿನವಾಗಿದೆ ಎಂದು ಮಾಜಿ ಮೇಯರ್‌ ಶಿವಕುಮಾರ್‌ ಟೀಕೆ ಮಾಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಪ್ರಥಮ ಪ್ರಜೆ. ಅಂತಹವರನ್ನು ಅಗೌರವವಾಗಿ ನಡೆಸಿಕೊಂಡಿದ್ದಾರೆ. ಕಾಂಗ್ರೆಸ್‌ ಕಾಲದಿಂದಲೂ ಸಾಂವಿಧಾನಿಕವಾಗಿ ಅಪಮಾನ ಮಾಡಿಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ಇನ್ನು ಅಧಿವೇಶನದ ವೇಳೆ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್‌ ಅವರು ರಾಜ್ಯಪಾಲರಿಗೆ ಬೆರಳು ತೋರಿಸಿ ಟೀಕೆ ಮಾಡಿದ್ದಾರೆ. ಹಲ್ಲೆಗೆ ಮುಂದಾಗಿದ್ದಾರೆ. ಅವರು ಸದನದ ಸದಸ್ಯರಾಗಲು ಅರ್ಹರಲ್ಲ. ಇಂತಹವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

 

Tags:
error: Content is protected !!