ಶ್ರೀನಗರ: ಕಾಶ್ಮೀರದ ಸುತ್ತಮುತ್ತ ಭಾರೀ ಹಿಮಮಳೆಯಾಗುತ್ತಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಹಲವು ವರ್ಷಗಳ ಬಳಿಕ ಇಷ್ಟೊಂದು ಹಿಮಪಾತವಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಭಾರೀ ಹಿಮಪಾತದಿಂದ ಜನರು ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದ್ದು, ವೈದ್ಯಕೀಯ ತುರ್ತು ಪರಿಸ್ಥಿತಿಗೆ ಪರದಾಡುವಂತಾಗಿದೆ.
ಬುಡ್ಗಮ್, ಬಾರಾಮುಲ್ಲಾ ಮತ್ತು ಪುಲ್ವಾಮಾದಲ್ಲಿ ಅಧಿಕ ಹಿಮಪಾತವಾಗುತ್ತಿದ್ದು, ಇದು ಮೂಲಸೌಕರ್ಯಕ್ಕೆ ಹಾನಿಮಾಡುವ ಸಾಧ್ಯತೆ ಎದುರಾಗಿದೆ.
ಗಾಳಿಯ ಪ್ರಭಾವ ಹೆಚ್ಚಾಗಿರುವುದರಿಂದ ಶ್ರೀನಗರ ಮತ್ತು ಪುಲ್ವಾಮಾದಲ್ಲಿ ಬಲವಾದ ಗಾಳಿಗೆ ಛಾವಣಿಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಅನೇಕ ಮನೆಗಳು ಕೂಡ ಹಾನಿಯಾಗಿದ್ದು, ಜನತೆ ಆತಂಕಕ್ಕೀಡಾಗಿದ್ದಾರೆ.





