Mysore
18
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಸಿಲಿಕಾನ್‌ ಸಿಟಿಗೆ ಟ್ರಾಫಿಕ್‌ ಹೊರೆ : ಬೆಂಗಳೂರು ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ 2ನೇ ನಗರ

ಬೆಂಗಳೂರು : ಸಿಲಿಕಾನ್ ಸಿಟಿ ಎಂಬ ಖ್ಯಾತಿಗೆ ಒಳಗಾಗಿರುವ ರಾಜ್ಯ ರಾಜಧಾನಿ ಬೆಂಗಳೂರು ಇದೀಗ ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ ಎರಡನೇ ನಗರ ಎಂಬ ಅಪಖ್ಯಾತಿಗೂ ಪಾತ್ರವಾಗಿದೆ.

ಖಾಸಗಿ ಸಂಸ್ಥೆ ಟಾಮ್ ಟಾಮ್ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಹೆಚ್ಚು ವಾಹನ ದಟ್ಟಣೆ ಹೊಂದಿರುವ ನಗರಗಳ ಪೈಕಿ ಐಟಿಬಿಟಿ ಸಿಟಿ ಬೆಂಗಳೂರು ಎರಡನೇ ಸ್ಥಾನ ಪಡೆದುಕೊಂಡಿದೆ.

ವರದಿ ಪ್ರಕಾರ 2025 ರ ವಾರ್ಷಿಕ ಟ್ರಾಫಿಕ್ ಇಂಡೆಕ್ಸ್ ವರದಿ ಆಧರಿಸಿ ಬೆಂಗಳೂರಿಗೆ ವಿಶ್ವದ ನಗರಗಳಲ್ಲಿ 2ನೇ ಸ್ಥಾನ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯೂ ಟ್ರಾಫಿಕ್ ಸಮಸ್ಯೆ ಹೆಚ್ಚಳವಾಗಿದ್ದು.‌ ನಿರೀಕ್ಷೆಗೂ ಮೀರಿ ವಾಹನ ನೋಂದಣಿ ಆಗ್ತಿರೋದೇ ಟ್ರಾಫಿಕ್ ಸಮಸ್ಯೆಗೆ ಕಾರಣ ಅನ್ನೋದು ಕಂಡುಬಂದಿದೆ.

ನಗರದಲ್ಲಿ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಬಳಕೆ ದ್ವಿಗುಣಗೊಳ್ಳುತ್ತಿರುವುದರ ನಡುವೆಯೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ನಗರಗಳಲ್ಲಿ ಮೊದಲ ಸ್ಥಾನ ಮೆಕ್ಸಿಕೋ ಸಿಟಿಗೆ ಬಂದಿದ್ದರೆ, ಎರಡನೇ ಸ್ಥಾನ ಬೆಂಗಳೂರು ಇದೆ, ಮೂರನೇ ಸ್ಥಾನ ಡಬ್ಲಿನ್ (ಐಲೆರ್ಂಡ್) ಇದೆ.

ಭಾರತದ ಇತರ ನಗರಗಳಲ್ಲಿ ಪುಣೆ 5ನೇ ಸ್ಥಾನ, ಮುಂಬೈ 18ನೇ ಸ್ಥಾನ, ನವದೆಹಲಿ 23ನೇ ಸ್ಥಾನ, ಕೋಲ್ಕತ್ತ 29ನೇ ಸ್ಥಾನ ಪಡೆದುಕೊಂಡಿವೆ.

 

Tags:
error: Content is protected !!