Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ಬೆಳ್ಳಿ ಬರೋಬ್ಬರಿ 20 ಸಾವಿರ ರೂ.ಇಳಿಕೆ : ಚಿನ್ನದ ದರದಲ್ಲೂ ದಿಢೀರ್ 4 ಸಾವಿರ ರೂ ಕುಸಿತ

ಹೈದರಾಬಾದ್ : ಕಳೆದ ಕೆಲವು ದಿನಗಳಿಂದ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಇದ್ದಕ್ಕಿದ್ದಂತೆ ಗಮನಾರ್ಹ ಕುಸಿತ ಕಂಡವು. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ವಹಿವಾಟು ಪ್ರಾರಂಭವಾದ ತಕ್ಷಣ ಎರಡೂ ಅಮೂಲ್ಯ ಲೋಹಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ.

ಇದು ಮಾರುಕಟ್ಟೆಯಲ್ಲಿ ಹೂಡಿಕೆದಾರರನ್ನು ಅಚ್ಚರಿಗೊಳಿಸಿತು. ಬೆಳ್ಳಿ ಪ್ರತಿ ಕೆಜಿಗೆ ಸುಮಾರು 20,000 ರೂ. ಕಡಿಮೆಯಾದರೆ, ಚಿನ್ನದ ಬೆಲೆ ಕೂಡ 10 ಗ್ರಾಂಗೆ 4,000 ರೂ.ಗಿಂತ ಹೆಚ್ಚು ಇಳಿಕೆ ದಾಖಲಿಸಿದೆ. ಬೆಳ್ಳಿ ಆರಂಭಿಕ ಹಂತದಲ್ಲಿ ತೀವ್ರವಾಗಿ ಕುಸಿತ ಕಂಡಿತು. ಬೆಳ್ಳಿ ಬುಧವಾರ ಪ್ರತಿ ಕೆಜಿಗೆ 3,25,602 ರೂ.ಗೆ ಮುಕ್ತಾಯಗೊಂಡಿತ್ತು. ಗುರುವಾರ ಬೆಳಗ್ಗೆ ಮಾರುಕಟ್ಟೆ ಆರಂಭವಾದ ತಕ್ಷಣ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 3,05,753 ರೂ.ಗೆ ಇಳಿಕೆ ದಾಖಲಿಸಿತು. ಒಂದೇ ಬಾರಿಗೆ ಪ್ರತಿ ಕೆಜಿಗೆ ಸುಮಾರು 19,849 ರಷ್ಟು ಕುಸಿತ ಕಂಡಿತು. ಇತ್ತೀಚಿನ ದಿನಗಳಲ್ಲಿ ತೀವ್ರ ಏರಿಕೆಯ ನಂತರ ಆದ ಅತಿ ದೊಡ್ಡ ಕುಸಿತವಿದು.

ಚಿನ್ನದ ಬೆಲೆಯಲ್ಲೂ ಭಾರಿ ಕುಸಿತ
ಬೆಳ್ಳಿಯ ಜೊತೆಗೆ ಚಿನ್ನದ ಬೆಲೆಗಳು ಸಹ ತೀವ್ರ ಕುಸಿತ ಕಂಡಿವೆ. ಕಳೆದ ಮೂರು ವಹಿವಾಟಿನಲ್ಲಿ ಚಿನ್ನವು ನಿರಂತರ ಏರಿಕೆ ದಾಖಲಿಸಿತ್ತು. ಈ ಮೂಲಕ ಬಂಗಾರ ಜೀವಿತಾವಽಯ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು. ಬುಧವಾರ ಫೆಬ್ರವರಿ 5 ರ ಫ್ಯೂಚರ್ ವಹಿವಾಟಿನಲ್ಲಿ 10 ಗ್ರಾಂಗೆ 1,52,862ಕ್ಕೆ ಮುಕ್ತಾಯಗೊಂಡಿತ್ತು. ಆದಾಗ್ಯೂ ಗುರುವಾರ ಇದು 10 ಗ್ರಾಂಗೆ 1,48,777 ಕ್ಕೆ ಇಳಿದಿದೆ. ಈ ಮೂಲಕ ಬಂಗಾರ ಇಂದಿನ ವಹಿವಾಟಿನಲ್ಲಿ ಸುಮಾರು 4,085ರಷ್ಟು ಇಳಿಕೆ ಕಂಡು ಮಧ್ಯಮ ವರ್ಗ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.

Tags:
error: Content is protected !!