ದಕ್ಷಿಣ ಕನ್ನಡ: ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣು ದೇವಸ್ಥಾನದ ಆದಾಯ 2025ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ.
ಒಟ್ಟು 14 ಕೋಟಿ 77 ಲಕ್ಷದ 80 ಸಾವಿರ ರೂ ಆದಾಯ ಸಂಗ್ರಹಿಸಿದ್ದು, ಹೊಸ ದಾಖಲೆ ಮಾಡಿದೆ.
ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ವಿಶೇಷವಾಗಿ ನಾಗರಪಂಚಮಿ, ಕಾರ್ತಿಕ ಮಾಸ, ಡಿಸೆಂಬರ್ ತಿಂಗಳ ರಜಾಕಾಲ ಹಾಗೂ ವಿಶೇಷ ಪೂಜಾ ದಿನಗಳಲ್ಲಿ ಭಕ್ತರು ಗಣನೀಯವಾಗಿ ಹೆಚ್ಚಿರುವುದು ಆದಾಯ ವೃದ್ಧಿಗೆ ಪ್ರಮುಖ ಕಾರಣವಾಗಿದೆ.
ಭಕ್ತರ ಸಹಕಾರದಿಂದ ಸಂಗ್ರಹವಾಗುತ್ತಿರುವ ಆದಾಯವನ್ನು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು, ಅನ್ನದಾನ ಸೇವೆ, ಮೂಲಸೌಕರ್ಯ ಸೇರಿದಂತೆ ಹಲವು ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ.





