1 ಕೆ.ಜಿ.ಬೆಳ್ಳಿಗೆ 3.30 ಲಕ್ಷ ರೂಪಾಯಿ
ಹೈದರಾಬಾದ್ : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ನಿಲ್ಲುತ್ತಿಲ್ಲ. ಬುಧವಾರ ಹಳದಿ ಮತ್ತು ಬಿಳಿ ಲೋಹದ ಬೆಲೆಗಳು ಇತಿಹಾಸದಲ್ಲಿ ಅಭೂತಪೂರ್ವ ಗರಿಷ್ಠ ಮಟ್ಟವನ್ನು ತಲುಪಿವೆ.
ಹೈದರಾಬಾದ್ ಮಾರುಕಟ್ಟೆಯಲ್ಲಿ ಬೆಳಗ್ಗೆ 10 ಗ್ರಾಂ ಚಿನ್ನದ ಬೆಲೆ ರೂ. 1,61,100 ಆಗಿತ್ತು. ಬೆಂಗಳೂರಿನಲ್ಲಿ ಸಂಜೆ ವಹಿವಾಟಿನ ವೇಳೆ ತುಸು ತಗ್ಗಿದ್ದು, 1,58,759ಕ್ಕೆ ವಹಿವಾಟು ನಡೆಸುತ್ತಿತ್ತು. ಮಂಗಳವಾರಕ್ಕೆ ಹೋಲಿಸಿದರೆ ಇದು ಸುಮಾರು ರೂ. 9,೦೦೦ ಹೆಚ್ಚಾಗಿದೆ. (ಸೂಚನೆ: ಇದು ಮಾರುಕಟ್ಟೆ ವ್ಯವಹಾರಕ್ಕೆ ಅನುಗುಣವಾಗಿ ಏರಿಳಿತ ಕಾಣುತ್ತಿರುತ್ತದೆ)
ಬೆಳ್ಳಿ ಬೆಲೆಯೂ ಏರಿಕೆಯಾಗುತ್ತಿದ್ದು, ಬೆಳಗಿನ ವ್ಯವಹಾರದಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ 3,30,000 ರೂ. ಇತ್ತು. ಮಂಗಳವಾರಕ್ಕೆ ಹೋಲಿಸಿದರೆ ಒಂದು ಕಿಲೋ ಬೆಳ್ಳಿಯ ಬೆಲೆ ಒಂದೇ ದಿನದಲ್ಲಿ 14,000 ರೂ. ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಮೊದಲ ಬಾರಿಗೆ ಔನ್ಸ್‌ಗೆ 4,800 ಮೈಲಿಗಲ್ಲನ್ನು ದಾಟಿ ಹೊಸ ದಾಖಲೆಯನ್ನು ಸ್ಥಾಪಿಸಿದೆ. ಈ ಸಂದರ್ಭದಲ್ಲಿ ಚಿನ್ನವು ಹೂಡಿಕೆದಾರರಿಗೆ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯಾಗಿದೆ. ಅದೇ ರೀತಿ ಬೆಳ್ಳಿಯ ಬೆಲೆಯೂ ಪ್ರತಿ ಔನ್ಸ್‌ಗೆ 95.87 ರ ಗರಿಷ್ಠ ಮಟ್ಟವನ್ನು ತಲುಪಿದೆ.
ಯುಎಸ್ ಡಾಲರ್‌ನ ದುರ್ಬಲತೆ, ಗ್ರೀನ್‌ಲ್ಯಾಂಡ್ ಬಿಕ್ಕಟ್ಟಿನ ಸುತ್ತಲಿನ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಜಪಾನಿನ ಸರ್ಕಾರಿ ಬಾಂಡ್ ಮಾರುಕಟ್ಟೆಯಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಏರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ.





