ಮೈಸೂರು : ನಗರದ ಅಪೋಲೋ ಬಿಜಿಎಸ್ ಆಸ್ಪತ್ರೆಯು ಮೈಸೂರಿನಲ್ಲಿ ಮೊದಲ ಸಮಗ್ರ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಆರಂಭಿಸಿದೆ. ಇದು ಈ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಆರೈಕೆಯಲ್ಲಿ ಸಾಧಿಸಿದ ಪ್ರಮುಖ ಮೈಲಿಗಲ್ಲು ಎಂದು ಅಪೋಲೋ ಆಸ್ಪತ್ರೆಗಳ ಕರ್ನಾಟಕ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಜಿ.ಭರತೀಶ್ ರೆಡ್ಡಿ ತಿಳಿಸಿದರು.
ನಗರದ ಅಪೋಲೋ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಅತ್ಯಾಧುನಿಕ ರೋಬೊಟಿಕ್ ಶಸಚಿಕಿತ್ಸೆಯ ಮೂಲಕ ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂತ್ರಶಾಸ್ತ್ರ, ಕಾರ್ಡಿಯೋಥೊರಾಸಿಕ್ ಮತ್ತು ನಾಳೀಯ ಶಸ್ತ್ರಚಿಕಿತ್ಸೆ(ಸಿಟಿವಿಎಸ್), ಇಎನ್‌ಟಿ, ಸ್ತ್ರೀರೋಗ ಶಸ್ತ್ರಚಿಕಿತ್ಸೆ, ಮೂಳೆ ಚಿಕಿತ್ಸೆ, ಆಂಕೋಲಾಜಿ, ಜಠರ ಕರುಳಿನ ಮತ್ತು ಎಚ್‌ಪಿಬಿಗೆ ಸಂಬಂಽಸಿದಂತ ರೋಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳನ್ನು ಒಂದೇ ಸೂರಿನಡಿ ನೀಡಲಾಗುತ್ತದೆ ಎಂದರು.
ರೋಬೊಟಿಕ್ ಶಸ್ತ್ರಚಿಕಿತ್ಸೆಯು ೩ಡಿ ಚಿತ್ರಣದೊಂದಿಗೆ ದೇಹದ ಸೂಕ್ಷ್ಮ ಸ್ಥಳಗಳನ್ನು ನಿಖರವಾಗಿ ನೀಡುತ್ತದೆ. ಅಲ್ಲದೇ ದೇಹದ ಸಂಕೀರ್ಣ ಅಂಗರಚನಾ ಪ್ರದೇಶಗಳನ್ನು ಸುಲಭವಾಗಿ ಕೈಗೆ ಸಿಗುವಂತೆ ಮಾಡುತ್ತದೆ. ಪ್ರಮುಖ ಅಂಗ ರಚನೆಗಳಿಗೆ ರಕ್ಷಣೆ ಒದಗಿಸುತ್ತದೆ. ಇದರಿಂದ ಕಡಿಮೆ ನೋವು, ಕಡಿಮೆ ರಕ್ತದ ನಷ್ಟ ಉಂಟಾಗುತ್ತದೆ. ಅಲ್ಲದೇ, ರೋಗಿಗಳಿಗೆ ತ್ವರಿತ ಚೇತರಿಕೆ ನೀಡುವುದರೊಂದಿಗೆ ಆಸ್ಪತ್ರೆಯ ವಾಸ್ತವ್ಯವನ್ನೂ ಕಡಿಮೆಯಾಗಿಸುತ್ತದೆ ಎಂದರು.
ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ.ನೈರುತ್ಯ, ಮೂಳೆ ಶಸ್ತ್ರಚಿಕಿತ್ಸಕ ಡಾ.ವೈ.ಬಿ.ಜಯವರ್ಧನ್, ಮೂಳೆ ಶಸ್ತ್ರಚಿಕಿತ್ಸಕ ಡಾ.ಶ್ರೇಯಸ್ ಆಳ್ವಾ, ಮೂಳೆ ಶಸ್ತ್ರಚಿಕಿತ್ಸಕ ಡಾ.ನಿತಿನ್ ಶ್ರೀಚಂದ್, ಜನರಲ್ ಸರ್ಜನ್ ಡಾ.ಬಿ.ಎನ್.ಜಯಂತ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಎಂ.ಡಿ.ರಶ್ಮಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಎಲ್.ವಿ.ವನಿತಾ, ಸೀನಿಯರ್ ಮೂತ್ರಶಾಸ್ತ್ರಜ್ಞ ಡಾ.ಎಂ.ರಾಘವೇಂದ್ರನ್, ಮೂತ್ರಶಾಸ್ತ್ರಜ್ಞ ಡಾ.ಕಿರಣ್‌ಕುಮಾರ್ ಶೆಟ್ಟಿ, ಶಸ್ತ್ರಚಿಕಿತ್ಸಾ ಆಂಕೋಲಾಜಿಸ್ಟ್ ಡಾ.ವೈ.ರಮ್ಯಾ, ಸಿಟಿವಿಎಸ್ ಸರ್ಜನ್ ಡಾ.ಯೂಸುಫ್ ಮೊಹಮ್ಮದ್ ರಫಿ, ಲಿವರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಡಾ.ಸಾಗರ್ ನಾರಾಯಣ್ ಉಪಸ್ಥಿತರಿದ್ದರು.




