Mysore
18
clear sky

Social Media

ಭಾನುವಾರ, 18 ಜನವರಿ 2026
Light
Dark

PMFBY |ಬೆಳೆ ವಿಮೆ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಕೃಷಿ ಇಲಾಖೆಗೆ ದ್ವಿತೀಯ ಸ್ಥಾನ

ಬೆಂಗಳೂರು : ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನ ದೊರೆತಿದೆ. ದೊಡ್ಡ ರಾಜ್ಯಗಳ ಪೈಕಿ ಯೋಜನೆ ಅನುಷ್ಠಾನದಲ್ಲಿ ಒಟ್ಟಾರೆ ಪ್ರಗತಿಯಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು, ಕೃಷಿ ಇಲಾಖೆಗೆ ಪ್ರಶಸ್ತಿ ಸಂದಿದೆ.

27,04,166 ರೈತರು ನೋಂದಣೆ ಪೈಕಿ 11,85,642 ರೈತರು ರೂ 2094 ಕೋಟಿ ಕ್ಲೇಮ್ ಮಾಡಿದ್ದಾರೆ. 2024-25 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಭಾರತ ಸರ್ಕಾರ ಪ್ರಶಂಸನ ಪತ್ರವನ್ನು ನೀಡಿದೆ. ರಾಜ್ಯ ಕೃಷಿ ಇಲಾಖೆಯ ಆಯುಕ್ತರು ಹಾಗೂ ಕೃಷಿ ನಿರ್ದೇಶಕರು ಇಂದು  ಬೆಂಗಳೂರಿನಲ್ಲಿ ನಡೆದ 13ನೆಯ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತ ಸರ್ಕಾರ ಸಹಕಾರ ಸಚಿವಾಲಯ   ಕಾರ್ಯದರ್ಶಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

Tags:
error: Content is protected !!