ಹನೂರು: ತಾಲ್ಲೂಕಿನ ಮಲ್ಲಯ್ಯನ ಪುರ ಗ್ರಾಮದ ರಾಮಚಂದ್ರ ಎಂಬುವವರಿಗೆ ಸೇರಿದ ಹಸುವನ್ನು ಜಮೀನಿನಲ್ಲಿ ಮೇಯಲು ಬಿಟ್ಟಿದ್ದಾಗ ಅರಣ್ಯ ಪ್ರದೇಶದಿಂದ ಬಂದ ಚಿರತೆಯೊಂದು ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಜರುಗಿದೆ.
ಮಲ್ಲಯ್ಯನಪುರ ಗ್ರಾಮದ ರೈತ ರಾಮಚಂದ್ರ ಎಂಬುವವರೇ ಹಸುವನ್ನು ಕಳೆದುಕೊಂಡ ರೈತನಾಗಿದ್ದಾರೆ.
ಭಯಭೀತರಾದ ಗ್ರಾಮಸ್ಥರು: ಮಲ್ಲಯ್ಯನಪುರ ಗ್ರಾಮದ ನಿವಾಸಿಗಳು ಹಸುವನ್ನು ಚಿರತೆ ಕೊಂದಿರುವುದರಿಂದ ಭಯಪಡುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ .
ಲಕ್ಷಾಂತರ ರೂ ಹಸು ಖರೀದಿಸಿ ಸಾಕಿದ್ದ ರೈತನಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತೆ ಆಗಿದ್ದು, ಸಾಲದ ಸುಳಿಯಲ್ಲಿ ರೈತ ಸಿಲುಕಿದ್ದಾನೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ರೈತನಿಗೆ ಪರಿಹಾರ ನೀಡಬೇಕು ಎಂದು ರೈತ ಸಂಘದ ಅಧ್ಯಕ್ಷ ಚಿಕ್ಕರಾಜು ಆಗ್ರಹಿಸಿದ್ದಾರೆ.





