ಹಾಸನ: ಖಾಸಗಿ ಫೈನಾನ್ಸ್ ಸಿಬ್ಬಂದಿ ಅಟ್ಟಹಾಸಕ್ಕೆ ವೃದ್ಧ ದಂಪತಿ ಬೀದಿಗೆ ಬಿದ್ದಿದ್ದು, ಸಾಲ ಕಟ್ಟಿಲ್ಲವೆಂದು ವೃದ್ಧ ದಂಪತಿಯನ್ನು ಫೈನಾನ್ಸ್ ಸಿಬ್ಬಂದಿ ಮನೆಯಿಂದ ಹೊರಗೆ ಹಾಕಿದ್ದಾರೆ.
ಖಾಸಗಿ ಫೈನಾನ್ಸ್ ಸಿಬ್ಬಂದಿ ದೌರ್ಜನ್ಯದಿಂದ ದಂಪತಿ ಬೀದಿಗೆ ಬಿದ್ದಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊರಟಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ.
ಸಣ್ಣಯ್ಯ ಹಾಗೂ ಜಯಮ್ಮ ಅವರನ್ನು ಮನೆಯಿಂದ ಹೊರಹಾಕಿ ಬೀಗ ಹಾಕಲಾಗಿದೆ. ಕೋರ್ಟ್ ಆದೇಶವಿದೆ ಎಂದು ಮನೆಗೆ ಖಾಗಿ ಫೈನಾನ್ಸ್ ಸಿಬ್ಬಂದಿ ಬೀಗ ಹಾಕಿದ್ದಾರೆ.
ವೃದ್ಧ ದಂಪತಿಯ ಜಾನುವಾರು ಕೊಟ್ಟಿಗೆಗೂ ಬೀಗ ಹಾಕಲಾಗಿದೆ. 2023ರಲ್ಲಿ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಮನೆ ಅಡಮಾನ ಬಿಟ್ಟು ದಂಪತಿ ಖಾಸಗಿ ಫೈನಾನ್ಸ್‌ನಿಂದ ಎರಡು ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಒಂದು ವರ್ಷ ಸಾಲದ ಕಂತುಗಳನ್ನು ಪಾವತಿಸಿದ್ದರು.
ಇತ್ತೀಚೆಗೆ ಸಾಲದ ಕಂತು ಕಟ್ಟಲು ಆಗಿರಲಿಲ್ಲ. ಅವರನ್ನು ಮನೆಯಿಂದ ಹೊರಗೆ ಹಾಕಿರುವುದರಿಂದ ಕೊರೆಯುವ ಚಳಿಯಲ್ಲಿ ಬೀದಿಯಲ್ಲಿಯೇ ದಂಪತಿ ವಾಸ ಮಾಡುತ್ತಿದ್ದು, ಒಂದು ವಾರದಿಂದ ಮನೆಯ ಹೊರಗೆ ದಂಪತಿ ವಾಸ ಮಾಡುತ್ತಿದ್ದಾರೆ.
ನಾವು ಸಾಲದ ಹಣ ತೀರಿಸುತ್ತೇವೆ ಸಮಯ ಕೊಡಿ ಎಂದು ಮನವಿ ಮಾಡಿದ್ದಾರೆ. ಫೈನಾನ್ಸ್ ಕಂಪನಿ ಸಿಬ್ಬಂದಿ ಅಮಾನವೀಯ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





