ಚಾಮರಾಜನಗರ : ತಾಲ್ಲೂಕಿನ ಬಡಗಲಪುರ ಗ್ರಾಮದಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆ ನಡೆದಿದೆ.
ಜಮೀನಿನಲ್ಲಿರುವ ಕೊಟ್ಟಿಗೆಯಲ್ಲಿ ಜಾನುವಾರುಗಳ ಜೊತೆಗೆ ಮೇಕೆಯನ್ನು ಕಟ್ಟಿದ್ದಾಗ ಚಿರತೆ ದಾಳಿ ನಡೆಸಿದೆ.
ಶುಕ್ರವಾರ ಮಧ್ಯರಾತ್ರಿ ದಾಳಿ ನಡೆಸಿರುವ ಚಿರತೆ ಮೇಕೆಯನ್ನು ಕೊಂದು ಜಮೀನಿನೊಳಗೆ ಸುಮಾರು 15 ಮೀಟರ್‌ವರೆಗೂ ಎಳೆದೊಯ್ದಿದೆ. ಅರೆಬರೆ ತಿಂದು ಕಳೇಬರವನ್ನು ಬಿಟ್ಟು ಹೋಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿ ಚಿರತೆ ಸೆರೆ ಹಿಡಿಯಬೇಕು, ಮೇಕೆಯ ಸಾವಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥ ವಿಶ್ವನಾಥ್ ಒತ್ತಾಯಿಸಿದ್ದಾರೆ.




