ಹನೂರು : ತಾಲೂಕಿನ ಕುರುಬರ ದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯ ಆಹಾರ ಪದಾರ್ಥ ಪಡೆದುಕೊಳ್ಳಲು ಬಂದಿದ್ದ ತಾಯಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ ಶಿಕ್ಷಕನಿಗೆ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಸಿ ಶ್ರೀಕಾಂತ್ ರವರು ಮೂರು ವರ್ಷ ಕಠಿಣ ಸೆರೆವಾಸ 10 ಸಾವಿರ ತಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಘಟನೆಯ ವಿವರ
ಕುರುಬರ ದೊಡ್ಡಿ ಗ್ರಾಮದ ಉರ್ದು ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೆಂಕಟನಾರಾಯಣ ಆಹಾರ ಪದಾರ್ಥ ಪಡೆಯಲು ಬಂದಿದ್ದ ವಿದ್ಯಾರ್ಥಿಯ ತಾಯಿಗೆ ಪಕ್ಕದ ಕೊಠಡಿಯೊಳಗೆ ಹೋಗುವಂತೆ ಹೇಳಿ ಕೊಠಡಿಯ ಬಾಗಿಲನ್ನು ಹಾಕಿ ಲೈಂಗಿಕ ಕಿರುಕುಳ ನೀಡುತ್ತಿದ್ದಾಗ ಮಹಿಳೆ ಕಿರುಚಿಕೊಂಡು ಹೊರ ಬಂದಿದ್ದರು. ಈ ಬಗ್ಗೆ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಮಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಲೋಕೇಶ್ ರವರು ಪ್ರಕರಣದ ವಿಚಾರಣೆ ಹಾಗೂ ತನಿಖೆ ನಡೆಸಿ ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೊಳ್ಳೇಗಾಲ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿ ನ್ಯಾಯಾಲಯ ಈ ಪ್ರಕರಣದಲ್ಲಿ ವೆಂಕಟ್ ನಾರಾಯಣ್ ರವರಿಗೆ 3 ವರ್ಷ ಕಠಿಣ ಸೆರೆವಾಸ 10,000 ದಂಡ 126(2) ಬಿಎನ್ಎಸ್ ರಡಿ ಒಂದು ತಿಂಗಳು ಸದಾ ಸೆರೆವಾಸ 5 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ವಿ ಗಿರೀಶ್ ರವರ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.




