Mysore
27
scattered clouds

Social Media

ಶನಿವಾರ, 17 ಜನವರಿ 2026
Light
Dark

ಚಾಮರಾಜನಗರ| ಚಿರತೆಗೆ ವಿಷವಿಕ್ಕಿ ಹತ್ಯೆ: ಓರ್ವ ಆರೋಪಿ ಬಂಧನ

ಚಾಮರಾಜನಗರ: ಚಿರತೆಯೊಂದಕ್ಕೆ ವಿಷಪ್ರಾಶನ ಮಾಡಿ ಕೊಂದು ಹಾಕಿದ್ದ ಆರೋಪಿಯೊಬ್ಬನನ್ನು ಚಾಮರಾಜನಗರ ಬಫರ್‌ ಅಧಿಕಾರಿಗಳು ಬಂಧಿಸಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಆಲೂರು ಹೊಮ್ಮ ಗ್ರಾಮದ ದೊರೆಸ್ವಾಮಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.

ಕಳೆದ ಎರಡು ದಿನಗಳ ಹಿಂದೆ ಜಮೀನು ಸಮೀಪ ಚಿರತೆಯ ಕಳೇಬರ ಪತ್ತೆಯಾಗಿತ್ತು. 5-6 ವರ್ಷ ವಯಸ್ಸಿನ ಗಂಡು ಚಿರತೆ ಇದಾಗಿದ್ದು, ಚಿರತೆ ಸಾವಿಗೆ ವಿಷವೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು.

ಅನುಮಾನದ ಹಿನ್ನೆಲೆಯಲ್ಲಿ ದೊರೆಸ್ವಾಮಿಯನ್ನು ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ. ಚಿರತೆಯು ಬೇಟೆಯಾಡಿದ್ದ ಮಾಂಸಕ್ಕೆ ವಿಷ ಬೆರೆಸಿ ಜಾನುವಾರುಗಳ ಸಾವಿಗೆ ಸೇಡು ತೀರಿಸಿಕೊಂಡಿರುವುದಾಗಿ ದೊರೆಸ್ವಾಮಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಬಂಧಿತ ಆರೋಪಿ ದೊರೆಸ್ವಾಮಿಯ ಎರಡು ಹಸು, ನಾಲ್ಕು ಕುರಿಯನ್ನು ಚಿರತೆಯು ತಿಂದು ತೇಗಿತ್ತು. ಈ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.

 

 

 

Tags:
error: Content is protected !!