ಗದಗ: ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜನವರಿ.10ರಂದು ಅಪರೂಪದ ಚಿನ್ನದ ಆಭರಣ ನಿಧಿ ಪತ್ತೆಯಾದ ಬೆನ್ನಲ್ಲೇ ಸರ್ಕಾರ ಇಂದಿನಿಂದ ಉತ್ಖನನ ಪ್ರಾರಂಭಿಸಲು ಮುಂದಾಗಿದೆ.
ಮನೆ ಅಡಿಪಾಯ ತೆಗೆಯುವಾಗ ಸುಮಾರು ಅರ್ಧ ಕೆಜಿಯಷ್ಟು ಚಿನ್ನದ ಆಭರಣಗಳು ಸಿಕ್ಕಿದ್ದ ಲಕ್ಕುಂಡಿ ಈಗ ಎಲ್ಲರ ಗಮನ ಸೆಳೆದಿದೆ. ಗ್ರಾಮದ ಕೋಟೆ ವೀರಭದ್ರೇಶ್ವರ ದೇವಾಲಯದ ಮುಂಭಾಗ ಇಂದಿನಿಂದ ಉತ್ಖನನ ಕಾರ್ಯ ಆರಂಭವಾಗಲಿದ್ದು, ಅಧಿಕಾರಿಗಳು ಜನಸಾಮಾನ್ಯರಲ್ಲಿ ಕುತೂಹಲ ಮೂಡಿಸಿದೆ.
ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಾಲಯ ಹಾಗೂ ಸಿದ್ದರ ಬಾವಿಗೆ ಸಂಪರ್ಕವಿತ್ತು ಎಂದು ಹೇಳಲಾಗಿದ್ದು, ಈ ಹಿಂದೆ ಕಟ್ಟಡದ ಅವಶೇಷಗಳು ಕಂಡುಬಂದಿದ್ದವು ಎಂದು ಹೇಳಲಾಗುತ್ತಿದೆ.




