ಮಹದೇಶ ಎಂ. ಗೌಡ
ಕ್ಯಾಲೆಂಡರ್ ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿ. ಈ ಹಬ್ಬವೆಂದರೆ ನೆನಪಿಗೆ ಬರುವುದು ಎಳ್ಳು ಬೆಲ್ಲದ ರುಚಿ. ಕಬ್ಬಿನ ಸಿಹಿ. ಈ ಹಬ್ಬವು ನಾಲ್ಕು ದಿನಗಳ ಕಾಲ ನಡೆಯುತ್ತದೆ. ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ತಮಿಳುನಾಡಿಗೆ ಹೊಂದಿಕೊಂಡಂತೆ ಇರುವ ಕೆಲ ಗ್ರಾಮ ಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಪೊಂಗಲ್ ಎಂಬು ದಾಗಿ ಆಚರಿಸುವುದು ವಿಶೇಷವಾಗಿದೆ.
ಸಂಕ್ರಾಂತಿ ಹಬ್ಬವನ್ನು ಮಲೆ ಮಹದೇಶ್ವರ ಬೆಟ್ಟ, ಮಾರ್ಟಳ್ಳಿ ಸುತ್ತಮುತ್ತ ನಾಲ್ಕು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಪ್ರತಿದಿನವೂ ಕೂಡ ವಿಶೇಷವಾಗಿ ಆಚರಿಸುವುದು ಸಂಪ್ರದಾಯ.
ಸಂಕ್ರಾಂತಿಯ ಮೊದಲನೇ ದಿನ ಭೋಗಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಕತ್ತಲು ಕಲ್ಮಶವನ್ನು ತೊಳೆಯುವ ದಿನ ವಾಗಿದ್ದು, ಈ ದಿನ ಮನೆ ಹೊರಗಡೆ ಬೆರಣಿ ಯಿಂದ ಬೆಂಕಿಯನ್ನು ಹಾಕಿ ಮನೆಯಲ್ಲಿ ರುವ ಬೇಡವಾದ ವಸ್ತುಗಳು ಹರಿದ ಬಟ್ಟೆ ಇನ್ನಿತರ ಸಾಮಗ್ರಿಗಳನ್ನು ಸುಟ್ಟು ಹಾಕಿ ಒಳ್ಳೆಯ ಅಂಶಗಳನ್ನು ಉಳಿಸಿಕೊಳ್ಳುವ ಪ್ರತೀಕವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
ಎರಡನೇ ದಿನ ಬಾಳು ಬೆಳಗುವ ಸೂರ್ಯನನ್ನು ಆರಾಽಸುತ್ತಾ ಸಿಹಿ ಪೊಂಗಲ್ ಅಥವಾ ಹುಗ್ಗಿಯನ್ನು ಒಲೆಯಲ್ಲಿ ಉಕ್ಕಿಸುವುದು ವಿಶೇಷ.
ಮೂರನೇ ದಿನ ಬಂಧುಗಳು, ಆತ್ಮೀಯರಿಗೆ ಎಳ್ಳು- ಬೆಲ್ಲ ವಿತರಿಸಿ ಸೌಹಾರ್ದ ವಾತಾವರಣವನ್ನು ಉತ್ತೇಜಿಸಲಾಗುತ್ತದೆ. ನಾಲ್ಕನೇ ದಿನ ಜನುವಾರುಗಳ ಮೈ ತೊಳೆದು, ಬಣ್ಣಗಳಿಂದ ಸಿಂಗರಿಸಿ ಸಂಜೆ ವೇಳೆ ಒಣ ಹುಲ್ಲಿಗೆ ಬೆಂಕಿ ಹಾಕಿ, ದನಗಳ ಕಿಚ್ಚು ಹಾಯಿಸಲಾಗುತ್ತದೆ.





