ಮಹಾದೇಶ್ ಎಂ ಗೌಡ
ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ ಕೊಡುತ್ತಿದ್ದು, ವಾಹನ ಸವಾರರಿಗೆ ಢವಢವ ಶುರುವಾಗಿದೆ.
ಈ ಕುರಿತು ಅಜ್ಜೀಪುರ ಗ್ರಾಮದ ಕೆಂಚಪ್ಪ ಮಾತನಾಡಿ, ಪ್ರತಿನಿತ್ಯ ರಸ್ತೆಬದಿ ಸಲಗ ಹಾಗೂ ಜೋಡಿ ಆನೆಗಳು ಬಂದು ನಿಲ್ಲುತ್ತಿವೆ. ಬೈಕ್ ಸವಾರರು ಆತಂಕದಿಂದಲೇ ಸಂಚರಿಸುವಂತಾಗಿದೆ. ಕೆಲವರು ಬೈಕ್ ನಿಲ್ಲಿಸಿಕೊಂಡು ಆನೆಗಳನ್ನ ನೋಡುತ್ತಾ ನಿಲ್ಲುತ್ತಿದ್ದು, ಅವು ಕಾಡಿನೊಳಗೆ ಹೋದಾಗ ಮುಂದೆ ಸಾಗುತ್ತಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಕ್ರಮವಹಿಸಿ ಗಸ್ತು ನಡೆಸಬೇಕು ಎಂದು ಒತ್ತಾಯಿಸಿದರು. ಯಾವುದೇ ಅನಾಹುತ ಆಗುವ ಮುನ್ನವೇ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.




