ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಪಟ್ಟಣಕ್ಕೆ ದಾರಿ ತಪ್ಪಿ ಬಂದಿದ್ದ ಜಿಂಕೆಯೊಂದನ್ನು ನಿವಾಸಿಗಳು ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಕಾಡಿನಿಂದ ದಾರಿತಪ್ಪಿ ನಾಡಿಗೆ ಬಂದ ಜಿಂಕೆಯನ್ನು ಕಂಡ ಬೀದಿ ನಾಯಿಗಳು ಅದರ ಮೇಲೆ ದಾಳಿ ಮಾಡಲು ಮುಂದಾಗಿದ್ದವು. ಇದರಿಂದ ಹೆದರಿದ ಜಿಂಕೆಯು ಪಟ್ಟಣದ ಹೊರವಲಯದ ಕೇರಳ ರಸ್ತೆಯಲ್ಲಿರುವ ನೂರ್ ಗ್ಯಾರೆಜ್ ಒಳಗೆ ನುಗ್ಗಿತು. ಇದನ್ನು ಕಂಡ ಹೆಚ್ ಎಸ್ ಮಹದೇವ ಪ್ರಸಾದ್ ನಗರದ ನಿವಾಸಿಗಳು ಜಿಂಕೆಯನ್ನು ರಕ್ಷಣೆ ಮಾಡಿದರು.
ಕೂಡಲೇ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆಯ ಆರೋಗ್ಯ ತಪಾಸಣೆ ನಡೆಸಿ ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬಂಡೀಪುರ ಅರಣ್ಯಕ್ಕೆ ಬಿಟ್ಟಿದ್ದಾರೆ.





