ಮೈಸೂರು: ಬೆಂಗಳೂರು ಡಿಜಿಸ್ಟ್ರೇಷನ್ ಹಳೆಯ ಬಸ್‌ಗಳು ಮೈಸೂರು ನಗರದಲ್ಲಿ ಸಂಚಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿ ವಸಂತ್ ಚೌವ್ಹಾಣ್ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರು ನಗರದಲ್ಲಿ ಹಳೆಯ ಬಸ್‌ಗಳು ಹೊಸ ಸೂಸುತ್ತಿದ್ದ ಬಗ್ಗೆ ಆಂದೋಲನ ಸುದ್ದಿ ಮಾಡಿತ್ತು. ಈ ಬಗ್ಗೆ ಮಾತನಾಡಿರುವ ಸಾರಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿ ವಸಂತ್ ಚೌವ್ಹಾಣ್ ಅವರು, ಹೊಗೆ ಸೂಸುತ್ತಿರುವ ಬಸ್‌ಗಳನ್ನು ಪರಿಶೀಲಿಸುತ್ತೇವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಗಮನಿಸಿದ್ದೇನೆ. ಈ ನಿಮ್ಮ ಸಲಹೆ ಮೇರೆಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.
ಇನ್ನು ಚಿತ್ರದುರ್ಗದಲ್ಲಿ ಸ್ಲೀಪರ್ ಬಸ್ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಮೈಸೂರಿನ ಆರ್‌ಟಿಓ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. 60ಕ್ಕೂ ಹೆಚ್ಚು ಸ್ಲೀಪರ್ ಬಸ್‌ಗಳನ್ನು ತಪಾಸಣೆ ಮಾಡಲಾಗಿದ್ದು, ಈ ಪೈಕಿ 16 ಪ್ರಕರಣ ದಾಖಲಾಗಿದೆ. ಬಸ್‌ಗಳಲ್ಲಿ ಅಳವಡಿಸಿರುವ ಸುರಕ್ಷತಾ ಪರಿಕರಗಳನ್ನು ಕೂಡ ತಪಾಸಣೆ ನಡೆಸಲಾಗುತ್ತಿದೆ. ಸಾರಿಗೆ ಸಚಿವರ ಸೂಚನೆ ಮೇರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಬಸ್‌ಗಳನ್ನು ತಪಾಸಣೆ ಮಾಡ್ತಿದ್ದೇವೆ. ಈ ಸಂಬಂಧ 16 ಪ್ರಕರಣಗಳನ್ನು ದಾಖಲು ಮಾಡಿದ್ದೇವೆ ಎಂದು ಹೇಳಿದರು.
ಇನ್ನು ಅಪಘಾತ ಪ್ರಕರಣಗಳಲ್ಲಿ ಮೈಸೂರು ಇಡೀ ರಾಜ್ಯದಲ್ಲಿ 6 ನೇ ಸ್ಥಾನದಲ್ಲಿದೆ. ಅಪಘಾತ ಪ್ರಕರಣದಲ್ಲಿ ಕಳೆದ 5 ವರ್ಷದಲ್ಲಿ ಮೈಸೂರು ಟಾಪ್ 10ರ ಒಳಗಿದ್ದು, ಕಳೆದ ಸಾಲಿನಲ್ಲಿ 6ನೇ ಸ್ಥಾನದಲ್ಲಿದೆ. ಹೀಗಾಗಿ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ರಸ್ತೆ ಸುರಕ್ಷತಾ ಮಾಸಾಚರಣೆ ಹಮ್ಮಿಕೊಳ್ಳುತ್ತಿದ್ದೇವೆ. ಈ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ವಾಹನ ಸವಾರರಿಗೆ ಮನವರಿಕೆ ಮಾಡಿಕೊಡ್ತೇವೆ ಎಂದು ತಿಳಿಸಿದರು.





