ಹನೂರು: ವಿದ್ಯುತ್ 66/11 ಕೆವಿ ಟವರ್ ದುರಸ್ತಿ, ವಿವಿಧ ಭಾಗದಲ್ಲಿ ವಿದ್ಯುತ್ ನಿಲುಗಡೆ ದುರಸ್ತಿಕಾರ್ಯ ಪ್ರಗತಿಯಲ್ಲಿರುವುದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತಯವಾಗಲಿದ್ದು ನಾಗರಿಕರು ಸಹಕಾರ ನೀಡಬೇಕು ಎಂದು ಉಪ ವಿಭಾಗದ ಎಇಇ ರಂಗಸ್ವಾಮಿ ಮನವಿ ಮಾಡಿದ್ದಾರೆ .
ಹನೂರು ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ 66/11 ಕೆ ವಿ ಮಾರ್ಗದ ಟವರ್ ಅಜ್ಜಿಪುರ ಸಮೀಪದ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದ ಕುಸಿದಿರುವುದರಿಂದ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ 11 ಕೆವಿ ಮಾರ್ಗದ ಬಂಡಳ್ಳಿ, ಅಜ್ಜಿಪುರ, ಕೌದಳ್ಳಿ, ರಾಮಪುರ, ಮಾರ್ಟಳ್ಳಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯ ಫೀಡರ್ ಗಳಲ್ಲಿನ ಗ್ರಾಮಗಳಿಗೆ ಬೆಳಗ್ಗೆಯಿಂದಲೇ ವಿದ್ಯುತ್ ವ್ಯತಾಯವಾಗಿದೆ. ಟವರ್ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿ ಇರುವುದರಿಂದ ಈ ಭಾಗದ ವಿದ್ಯುತ್ ಗ್ರಾಹಕರು ರೈತರು ಸಮಸ್ತ ನಾಗರಿಕರು ಟವರ್ ನಿರ್ಮಾಣ ಮಾಡುವವರೆಗೆ ಸಹಕಾರ ನೀಡಬೇಕು ಎಂದು ಎ.ಇ.ಇ ರಂಗಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





