ಹಾಸನ: ಕೌಟುಂಬಿಕ ಕಲಹದಿಂದ ಪುತ್ರನೇ ತಂದೆಯನ್ನು ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ.
ರಾಡ್‌ನಿಂದ ಹೊಡೆದು ಸತೀಶ್ ಅವರನ್ನು ಪುತ್ರ ರಂಜಿತ್ ಕೊಲೆ ಮಾಡಿದ್ದಾನೆ.
ಕೌಟುಂಬಿಕ ಕಲಹದಿಂದ ಪ್ರತ್ಯೇಕವಾಗಿ ತಾಯಿ ಮಗ ವಾಸವಾಗಿದ್ದರು. ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ತಾಯಿ, ಮಗ ವಾಸವಾಗಿದ್ದರು. ಇದೇ ವಿಚಾರಕ್ಕೆ ತಂದೆಯ ಜೊತೆ ಆಗಾಗ ಜಗಳ ನಡೆಯುತ್ತಿತ್ತು.
ನಿನ್ನೆ ಇದೇ ವಿಚಾರಕ್ಕೆ ತಂದೆ, ಮಗನ ನಡುವೆ ಜಗಳವಾಗಿತ್ತು. ಈ ವೇಳೆ ಸ್ಟೀಲ್ ರಾಡ್‌ನಿಂದ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





