ಮೈಸೂರು : ಸ್ಪಾಮ್ ಕರೆಗಳ ಮೂಲಕ ಡಿಜಿಟಲ್ ಅರೆಸ್ಟ್ ಹಾಗೂ ಡಿಜಿಟಲ್ ವಂಚನೆ ಮಾಡುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಫೋನಿನ ಕಾಲಿಂಗ್ ಆಪ್ ಅನ್ನು ಬ್ಲಾಕ್ ಮಾಡುವುದರ ಬದಲು ಟ್ರಾಯ್ ಡಿಎನ್‌ಡಿ ಆಪ್ ಅಥವಾ ಸೇವಾ ಪೂರೈಕೆ ಆಪ್ ಅಥವಾ 1909ಕ್ಕೆ ಕರೆ ಮಾಡಿ ಎಂದು ಟ್ರಾಯ್ ಸಲಹೆ ನೀಡಿದೆ.
ಈ ಸಂಬಂಧ ಮೊಬೈಲ್ ಎಸ್‌ಎಂಎಸ್ ಮೆಸೇಜ್ ಮೂಲಕ ಟ್ರಾಯ್ ಜನರಿಗೆ ಮಾಹಿತಿ ನೀಡುತ್ತಿದೆ. ಮೈಸೂರಿನಲ್ಲಿ 2024ರಲ್ಲಿ 40 ಕೋಟಿ ರೂಪಾಯಿಯಷ್ಟು ಡಿಜಿಟಲ್ ವಂಚನೆಯಾಗಿದೆ. 2025ರಲ್ಲಿ 30 ಕೋಟಿ ರೂಪಾಯಿಗೂ ಮೀರಿ ಡಿಜಿಟಲ್ ವಂಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಪಾಮ್ ಕರೆಗಳನ್ನು ಬ್ಲಾಕ್ ಮಾಡುವ ಬದಲು ಟ್ರಾಯ್ ಸೂಚಿಸಿದ ಆಪ್ ಹಾಗೂ ಸಂಖ್ಯೆಗೆ ಕರೆ ಮಾಡುವಂತೆ ಸಲಹೆ ನೀಡಿದೆ. ಡಿಜಿಟಲ್ ವಂಚನೆಗಳ ವಿರುದ್ಧ ಜನರಲ್ಲಿ ಟ್ರಾಯ್ ಪರಿಣಾಮಕಾರಿ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಸೆನ್ ಪೊಲೀಸರು ಕೂಡ ಅರಿವು ಮೂಡಿಸುತ್ತಿದ್ದಾರೆ ಎಂದಿದೆ ಟ್ರಾಯ್.





