Mysore
15
overcast clouds

Social Media

ಗುರುವಾರ, 08 ಜನವರಿ 2026
Light
Dark

ಸಮಾಜದಲ್ಲಿ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ: ಸಿಎಂ ಸಿದ್ದರಾಮಯ್ಯ ಬೇಸರ

ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ಡಾ ಕೆ ಶಿವಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇವತ್ತು ಸಮಾಜದಲ್ಲಿ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ. ಅಸಮಾನತೆ ನಿರ್ಮಾಣ ಆಗಿದೆ. ಚಾತುವರ್ಣ ವ್ಯವಸ್ಥೆ ಏಕೆ ಜಾರಿಯಲ್ಲಿತ್ತು.ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ವೈಚಾರಿಕ ಪ್ರಜ್ಣೆ ಬೆಳೆಸಿಕೊಳ್ಳಬೇಕು. ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ. ಶತ ಶತಮಾನಗಳಿಂದ ಗುಲಾಮಗಿರಿ ಅನುಭವಿಸಿದ ಪರಿಣಾಮ ನಮ್ಮಲ್ಲಿ ಗುಲಾಮಗಿರಿ ಮನಸ್ಥಿತಿ ಇದೆ. ಮೇಲ್ಜಾತಿಯ ಬಡವ ದಲಿತ ಜಾತಿಯ ಶ್ರೀಮಂತ ನನ್ನು ನಾವು ಮಾತನಾಡಿಸುವ ದಾಟಿಯೇ ಬೇರೆಯಾಗಿರುತ್ತದೆ. ಅಂಬೇಡ್ಕರ್ ಹಾಗೂ ಗಾಂಧಿರವರು ಪತ್ರಕರ್ತರಾಗಿದ್ದರು‌. ನಾವೆಲ್ಲಾ ಅಂಬೇಡ್ಕರ್ ಆಗಲು ಸಾಧ್ಯವಿಲ್ಲ. ಆದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ಪ್ರಯತ್ನ ಮಾಡಬೇಕು. ಶಿವಕುಮಾರ್‌ರವರು ನನ್ನೊಂದಿಗೆ ಸಾಮಾಜಿಕ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದರು. ಸಾಮಾಜಿಕ ವ್ಯವಸ್ಥೆ ಪರಿಹಾರ ಮಾಡುವುದರ ಬಗ್ಗೆ ಚಿಂತನೆ ಮಾಡುವುದು ಬಹಳ ಅಗತ್ಯವಿದೆ. ಬಹುಸಂಖ್ಯಾತರು‌ ಬಡತನದಿಂದ ಕೂಲಿ ಮಾಡುತ್ತಿದ್ದರೆ ಎಂದು ಚಿಂತನೆ ಮಾಡಬೇಕು ಎಂದು ಹೇಳಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಅನೇಕ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದೆ. ಎಸ್‌ಸಿಪಿ/ ಟಿಎಸ್‌ಪಿ ಕಾನೂನು ಮಾಡಿ ಜನಸಂಖ್ಯೆಯ ಅನುಗುಣವಾಗಿ ಮಾಡಿಲ್ಲ ಏಕೆ?.
ರಿಸರ್ವೇಷನ್ ಇನ್ ಪ್ರಮೋಷನ್ ಎಂದು ಸುಪ್ರೀಂ ಕೋರ್ಟ್ ಅನ್ ಕಾನ್ಸ್‌ಟ್ಯೂಷನ್ ಎಂದು ಹೇಳಿದ್ದರೂ, ದಲಿತ ಮಹಿಳೆ ರತ್ನಪ್ರಭಾ ರವರ ನೇತೃತ್ವದಲ್ಲಿ ಸಮಿತಿ ಮಾಡಿ ವರದಿಯ ನಂತರ ಸುಪ್ರೀಂ ಕೋರ್ಟ್ ನಲ್ಲಿ ಊರ್ಜಿತ ಆಯಿತು. ಏಕೆ ಇತರರು ಮಾಡಲಿಲ್ಲ. ಯಾವುದಾದರೂ ರಾಜ್ಯದಲ್ಲಿ ಮಾಡಿದ್ದಾರಾ.? ಪ್ರಧಾನ ಮಂತ್ರಿಗಳು ಮಾಡಿಲ್ಲ ಏಕೆ? ಮಹಾತ್ಮ ಗಾಂಧಿ ಜೀ, ಮನರೇಗಾ ಹೆಸರನ್ನು ತೆಗೆದುಹಾಕಿದರು. ಜೀ ರಾಮ್ ಜೀ ಎಂದು ಹೆಸರನ್ನು ಇಡಲಾಗಿದೆ. ಇದು ರಾಮ್ ಎಂದರೆ ಅಯೋಧ್ಯೆ ರಾಮ ಅಲ್ಲ. ಎಲ್ಲರಿಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸ್ವಾತಂತ್ರ್ಯ ಸಿಗಬೇಕು. ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಜಾತಿ ಹೋಗಿಲ್ಲ, ಜಾತಿ ವ್ಯವಸ್ಥೆ ನಿಂತ ನೀರು, ಆರ್ಥಿಕವಾಗಿ ಸ್ವಾವಲಂಬನೆ ಆದರೆ ಜಾತಿ ವ್ಯವಸ್ಥೆ ಹೋಗುತ್ತದೆ. ಕಂಟ್ರಾಕ್ಟ್ ನಲ್ಲಿ ಒಂದು ಕೋಟಿವರೆಗೆ ರಿಸರ್ವೆಷನ್ ಜಾರಿ ಮಾಡಿದ್ದೇವೆ. ಬಸವಣ್ಣ ರವರು ಹನ್ನೆರಡನೆಯ ಶತಮಾನದಲ್ಲೇ ಹೇಳಿದ್ದಾರೆ. ಇನ್ನೂ ಜಾತಿ ವ್ಯವಸ್ಥೆ ಹೋಗಿಲ್ಲ. ಇದು ಬಹಳ ಸೂಕ್ಷ್ಮ ಆದರೂ ಸತ್ಯ. ಇಂತಹ ವಿಷಯಗಳನ್ನು ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡಬೇಕು. ಬಡವರ ಕೈಯಲ್ಲಿ ದುಡ್ಡಿದ್ದರೆ ಗುಲಾಮರಾಗಿ ಕೆಲಸವನ್ನು ಮಾಡಲ್ವಲ್ಲ.‌ ಇನ್ನೊಬ್ಬರ ಮನೆಯಲ್ಲಿ ಅನ್ನಕ್ಕೂಸ್ಕರ ನಿಲ್ಲಬಾರದು ಎಂದು ನಾನು ಮುಖ್ಯಮಂತ್ರಿ ಆದ ಮೇಲೆ ಮೊದಲು ಅನ್ಮಬಾಗ್ಯ ಯೋಜನೆ ಮಾಡಿದೆ. ಪ್ರೊಡ್ಯೂಸ್ ಮಾಡುವುದು ಯಾರೋ ಮಜಾ ಮಾಡುವುದು ಯಾರೋ. ಕಾಯಕ ಮತ್ತು ದಾಸೋಹ ಸಮನಾಗಿ ಹಂಚಿಕೆ ಮಾಡಬೇಕು. ಅಸಮಾನತೆಯನ್ನು ಗಟ್ಟಿಯಾಗಿ ನಂಬುವಂತೆ ಮಾಡಿದ್ದಾರೆ. ಮೌಡ್ಯವನ್ನು ಕಂದಾಚಾರವನ್ನು ಅಷ್ಟರ ಮಟ್ಟಿಗೆ ತುಂಬಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು ಮಾಡಿದ್ದಾರೆ. ಇವತ್ತಿಗೂ ಇರುತ್ತಾರೆ, ನಾಳೆಯೂ ಇರುತ್ತಾರೆ. ಅಸಮಾನತೆ ಕಡಿಮೆ ಮಾಡಲು ಗ್ಯಾರೆಂಟಿ ಯೋಜನೆ ಜಾರಿ ಮಾಡಿದ್ದೇವೆ. ಬ್ಯಾಕ್‌ಲಾಗ್ ಭರ್ತಿ ಮಾಡಲು ಮಹಾದೇವಪ್ಪ ಅವರ ನೇತೃತ್ವದಲ್ಲಿ ಕಮಿಟಿ ಮಾಡಿದ್ದೇನೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಿವೃತ್ತಿ ವೇತನ ನೀಡಲು ಹಣ ಇರಲಿಲ್ಲ. ಇದಕ್ಕೆ ಹಣವನ್ನು ಕೊಟ್ಟಿದ್ದೇನೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಿವೃತ್ತಿ ವೇತನ ಕೊಡಲು ಹಣ ಇರಲಿಲ್ಲ ಇದು ಹಿಂದಿನ ವೈಸ್ ಚಾನ್ಸಲರ್ ಕಾರಣ. ಮೈಸೂರು ವಿಶ್ವವಿದ್ಯಾನಿಲಯ ಸರಿಪಡಿಸಲಾಗುತ್ತದೆ. ಮನರೇಗಾಕ್ಕೆ ಹಣವನ್ನು ಇಪ್ಪತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಕೊಡುತ್ತಿತ್ತು. ಈವಾಗ 60: 40 ಮಾಡಿದ್ದಾರೆ. ಇದರಿಂದಾಗಿ ರಾಜ್ಯ 2500 ಕೋಟಿ ನಷ್ಟ ಆಗಿದೆ. ಈ ಬಗ್ಗೆ ಮೋದಿಯವರಿಗೆ ಪತ್ರವನ್ನು ಬರೆದಿದ್ದೇನೆ. ಧ್ವನಿ ಇಲ್ಲದವರ ಪರವಾಗಿ ಶಿವಕುಮಾರ್ ಮಾತನಾಡಲಿ ಎಂದು ಕಿವಿಮಾತು ಹೇಳಿದರು.

 

Tags:
error: Content is protected !!