ಬೆಂಗಳೂರು: ತಮಗೆ Z ಶ್ರೇಣಿಯ ಭದ್ರತೆ ಕೊಡಿ ಎಂದು ಜನಾರ್ಧನ ರೆಡ್ಡಿ ಬರೆದಿರುವ ಪತ್ರ ನನಗೆ ಬಂದಿಲ್ಲ. ಪತ್ರ ಬಂದರೆ ಆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಜನಾರ್ಧನ ರೆಡ್ಡಿ ಕಂಪ್ಲೆಂಟ್ ಕೊಟ್ಟಿದ್ದಾರೆ. ಶಾಸಕ ಕೂಡ ದೂರು ಕೊಟ್ಟಿದ್ದಾರೆ. ಇಬ್ಬರ ದೂರು ಪಡೆದು ತನಿಖೆ ಮಾಡಲಾಗುತ್ತಿದೆ. ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಇನ್ನು ಘಟನೆ ವೇಳೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆ ಎಂಬ ಜನಾರ್ಧನ ರೆಡ್ಡಿ ಆರೋಪದ ಕುರಿತು ಮಾತನಾಡಿದ ಅವರು, ಈಗ ತನಿಖೆ ನಡೆಯುತ್ತಿದೆ. ತನಿಖೆ ಆದ ಮೇಲೆ ಇದೆಲ್ಲಾ ಗೊತ್ತಾಗಲಿದೆ. ತನಿಖೆಯಲ್ಲಿ ಬಂದೂಕು, ಹ್ಯಾಂಡ್ ಗ್ರೆನೈಡ್, ಪೆಟ್ರೋಲ್ ಬಾಂಬ್ ಇತ್ತಾ ಎಂಬುದರ ಬಗ್ಗೆ ಗೊತ್ತಾಗುತ್ತದೆ ಎಂದು ಹೇಳಿದರು.





