ಸುಕ್ಮಾ/ಬಿಜಾಪುರ: ಛತ್ತಿಸ್‍ಗಢದ ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಪ್ರತ್ಯೇಕ ಎನ್‍ಕೌಂಟರ್‌ಗಳಲಿ ಕುಖ್ಯಾತ ಮಾವೋವಾದಿ ಮಾಂಗ್ಟು (ಮತ್ತು ಹಂಗಾ ಮಡ್ಕಮ್ ಸೇರಿದಂತೆ 14ಕ್ಕೂ ಹೆಚ್ಚು ನಕ್ಸಲರು ಸಾವನ್ನಪ್ಪಿದ್ದಾರೆ.
ಸುಕ್ಮಾದಲ್ಲಿ 12ಕ್ಕೂ ಹೆಚ್ಚು ನಕ್ಸಲರು ಹತರಾಗಿದ್ದಾರೆ ಮತ್ತು ಪಕ್ಕದ ಬಿಜಾಪುರ ಜಿಲ್ಲೆಯಲ್ಲಿ ಇಬ್ಬರು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಕ್ಮಾ ಜಿಲ್ಲೆಯ ದಕ್ಷಿಣ ಪ್ರದೇಶದ ಕಾಡಿನಲ್ಲಿ ಭದ್ರತಾ ಪಡೆಯೊಂದಿಗೆ ನಡೆದ ಗುಂಡಿನ ಚಕಮಕಿ ನಡೆದಿದೆ. ಇದುವರೆಗೆ 12 ನಕ್ಸಲರನ್ನು ತಟಸ್ಥಗೊಳಿಸಲಾಗಿದೆ ಇದರಲ್ಲಿ ಮಾಂಗ್ಟು ಮತ್ತು ಹಂಗಾ ಮಡ್ಕಮ್ ಸೇರಿದ್ದಾರೆ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
ಇನ್ನೊಂದು ಕಾರ್ಯಾಚರಣೆಯಲ್ಲಿ ಬಿಜಾಪುರ ಜಿಲ್ಲೆಯ ಕಾಡಿನಲ್ಲಿ ರಾಜ್ಯ ಪೊಲೀಸರ ಜಿಲ್ಲಾ ಮೀಸಲು ಪಡೆ ಬೆಳಿಗ್ಗೆ 5 ಗಂಟೆ ಸುಮಾರಿಗೆ ಇದೇ ರೀತಿ ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಹೇಳಿದ್ದಾರೆ.
ಸ್ಥಳದಿಂದ ಒಂದು ಎಸ್ಎಲ್‍ಆರ್ ರೈಫಲ್ ಮತ್ತು ಒಂದು 12 ಬೋರ್ ರೈಫಲ್ ಮತ್ತು ಇಬ್ಬರು ನಕ್ಸಲರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.





