Mysore
22
overcast clouds

Social Media

ಶನಿವಾರ, 03 ಜನವರಿ 2026
Light
Dark

ನನ್ನ ವಿರುದ್ಧ 17 ಕೇಸ್‌ ಇದೆ, ಇನ್ನೂ ಹಾಕೋಕೆ ಹೇಳಿ ಆದ್ರೆ ದಾರಿ ತಪ್ಪಿಸಬೇಡಿ: ಪ್ರತಾಪ್‌ ಸಿಂಹ

pratap simha statement on dk shivakumar and siddaramaiah cm change debate

ಬೆಂಗಳೂರು: ನನ್ನ ವಿರುದ್ಧ 17 ಕೇಸ್‌ ಇದೆ. ಇನ್ನೂ ಹಾಕೋಕೆ ಹೇಳಿ ಆದರೆ ದಾರಿ ತಪ್ಪಿಸಬೇಡಿ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ತಿರುಗೇಟು ನೀಡಿದ್ದಾರೆ.

ದ್ವೇಷ ಭಾಷಣ ಪ್ರತಿಬಂಧಕ ಕಾಯಿದೆ ಕುರಿತಾದ ಪೋಸ್ಟ್‌ ಒಂದಕ್ಕೆ ಪ್ರತಾಪ್‌ ಸಿಂಹ ತಿರುಗೇಟು ನೀಡಿದ್ದು, ನಮ್ಮ ಸಿದ್ದರಾಮಯ್ಯ ಹೆಸರಿನ ಫೇಸ್‌ಬುಕ್‌ ಪೋಸ್ಟ್‌ಗೆ ಅವರು ತಿರುಗೇಟು ನೀಡಿದ್ದಾರೆ.

ಎರಡು ಮತ್ತು ಮೂರು ವರ್ಷಗಳ ಹಳೆಯ ಹೇಳಿಕೆಯನ್ನು ಕಟ್‌ ಅಂಡ್‌ ಪೇಸ್ಟ್‌ ಮಾಡಿ, ದ್ವೇಷ ಭಾಷಣ ಪ್ರತಿಬಂಧಕ ಕಾಯಿದೆಗೆ ಪ್ರತಾಪ್‌ ಸಿಂಹ ಹೆದರಿದ್ದಾನೆ ಎಂದು ಅಪಪ್ರಚಾರ ಮಾಡುತ್ತಿರುವ ಮಹಾನುಭಾವರೇ, ಕೇರಳ ಸಿಎಂ ಟ್ವೀಟ್‌ ಮತ್ತು ಜನರಲ್‌ ಸೆಕ್ರೆಟರಿ ವೇಣುಗೋಪಾಲ್‌ಗೆ ಹೆದರಿ ಅಕ್ರಮ ವಲಸಿಗರಿಗೆ ಮನೆ ಕೊಡಲು ಹೊರಟಿರುವ ಸಿಎಂಗೆ ನಾನು ಹೆದರುವವನಲ್ಲ. ನನ್ನ ವಿರುದ್ಧ ಪ್ರಸ್ತುತ 17 ಕೇಸುಗಳಿವೆ. ಇನ್ನೂ ಹಾಕೋಕೆ ಹೇಳಿ. ಆದರೆ ದಾರಿ ತಪ್ಪಿಸಬೇಡಿ ಎಂದು ತಿರುಗೇಟು ನೀಡಿದ್ದಾರೆ.

Tags:
error: Content is protected !!