ವಾಯುಗುಣ ಮಟ್ಟ ಸೂಚ್ಯಂಕ (ವಿವಿಎಎಚ್)ಪಟ್ಟಿಯಲ್ಲಿ, ರಾಜ್ಯದ ಸಾಂಸ್ಕ ತಿಕ ನಗರಿ ಮೈಸೂರು ರಾಷ್ಟ್ರಮಟ್ಟದಲ್ಲಿ ೩ನೇ ಸ್ಥಾನವನ್ನು ಮತ್ತು ರಾಜ್ಯಮಟ್ಟದಲ್ಲಿ ಮೊದಲನೇ ಸ್ಥಾನದಲ್ಲಿ ಇರುವುದಾಗಿ ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ. ಅಲ್ಲದೇ ದೇಶದ ಮೊದಲ ೧೦ ಸ್ವಚ್ಛ ನಗರಗಳಲ್ಲಿ ಕರ್ನಾಟಕದ ಮೂರು ನಗರಗಳು, ಅಂದರೆ ಮೈಸೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳು ಸ್ಥಾನ ಪಡೆದಿರುವುದು ರಾಜ್ಯದ ಜನತೆಗೆ ಹೆಮ್ಮೆಯ ಸಂಗತಿ.
ಮೈಸೂರು ನಗರವು ‘ನಿವೃತ್ತರ ಸ್ವರ್ಗ’ ಎನಿಸಿದೆ, ಈ ಕಾರಣಕ್ಕಾಗಿಯೇ ಮೈಸೂರು ನಗರವು ರಾಷ್ಟ್ರದಲ್ಲೇ ವಾಸಿಸಲು ಯೋಗ್ಯವಾದ ಸ್ಥಳವೆಂದು ಇತ್ತೀಚಿನ ದಿನಗಳಲ್ಲಿ ರಾಜ್ಯದ ಅಕ್ಕ-ಪಕ್ಕದ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮತ್ತು ರಾಜಸ್ಥಾನ, ಮತ್ತಿತರ ರಾಜ್ಯಗಳ ಕೆಲವು ಶ್ರೀಮಂತ ವರ್ಗದ ಜನರು ಮೈಸೂರು ನಗರದಲ್ಲಿ ದುಬಾರಿ ಬೆಲೆಗೆ ನಿವೇಶನ ಖರೀದಿಸಿ ವಿಲಾಸಿ ಬಂಗಲೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೇ ಮೈಸೂರು ನಗರ ಕೂಡ ಮುಂದೊಂದು ದಿನ ವಾಯುಮಾಲಿನ್ಯದಿಂದ ಕುಲುಷಿತ ವಾಗಬಹುದು, ‘ಮೈಸೂರು ಈಗಿರುವಂತೆಯೇ ಸಾಂಸ್ಕೃತಿಕ ನಗರಿಯೇ ಆಗಿರಲಿ’ ನಿವೃತ್ತರ ಸ್ವರ್ಗವೇ ಆಗಿ ಉಳಿಯಲಿ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





