Mysore
21
scattered clouds

Social Media

ಗುರುವಾರ, 22 ಜನವರಿ 2026
Light
Dark

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಕೇಸ್‌ : ವಹಿವಾಟಿಗೆ ತಡೆ

ಮೈಸೂರು : ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಹಿವಾಟು ನಡೆಸದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ವಲಯ ಕಚೇರಿ ೪ರ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಅಧಿಕಾರಿ ಹಾಗೂ ಓರ್ವ ನೌಕರ ಅಮಾನತ್ತಾಗಿದ್ದಾರೆ. ಸಸ್ಪೆಂಡ್ ಆಗಿರುವ ಸಿಬ್ಬಂದಿ ತಡೆಯಾಜ್ಞೆ ತಂದಿದ್ದಾರೆ. ಆದರೆ, ಪ್ರಕರಣ ಸಂಬಂಧ ಇಲಾಖೆ ತನಿಖೆ ನಡೆಯುತ್ತಿರುವ ಕಾರಣ ತನಿಖೆ ಮುಕ್ತಾಯವಾಗುವವರೆಗೆ ಆಸ್ತಿಗೆ ಸಂಬಂಧಪಟ್ಟಂತೆ ಯಾವುದೇ ವಹಿವಾಟು ನಡೆಸದಂತೆ ಆಯುಕ್ತ ಕೆ.ಆರ್.ರಕ್ಷಿತ್ ಸೂಚಿಸಿದ್ದಾರೆ.

ಗೋಕುಲಂ ೩ನೇ ಹಂತ ನಿವೇಶನ ಸಂಖ್ಯೆ ೮೬೭ ಲಿಲಿಯನ್ ಶಾರದಾ ಜೋಸೆಫ್ ಎಂಬವರಿಗೆ ಮುಡಾದಿಂದ ೧೯೮೨ರ ಜ.೨ ರಲ್ಲಿ ಮಂಜೂರಾಗಿದೆ. ೧೯೮೨ ಡಿಸೆಂಬರ್ ೩ರಲ್ಲಿ ಸ್ವಾಽನ ಪತ್ರ ನೀಡಲಾಗಿದೆ. ೧೯೮೩ರ ಸೆಪ್ಟೆಂಬರ್ ೩ರಲ್ಲಿ ಲಿಲಿಯನ್ ಶಾರದಾ ಜೋಸೆಫ್ ಮೃತಪಟ್ಟಿದ್ದಾರೆ. ೨೦೦೮ರ ಮೇ ೨೨ರಲ್ಲಿ ಪೌತಿದಾರರ ಕುಟುಂಬ ಜೀವಿತ ಪತ್ರದಂತೆ ಹಾಗೂ ನೋಂದಾಯಿತ ವಿಭಾಗ ಪತ್ರದಂತೆ ನವಿಲ್ ಮಾರ್ಕಸ್ ಜೋಸೆಫ್ ಎಂಬವರಿಗೆ ಸೇರಿದೆ ಎಂದು ದಾಖಲೆಗಳನ್ನ ಸೃಷ್ಟಿಸಿ ೨೦೨೪ರ ಏಪ್ರಿಲ್ ೬ರಂದು ವರ್ಗಾವಣೆ ಮಾಡಿ ಇದಕ್ಕೆ ಹೊಂದಿಕೊಂಡಂತಿರುವ ತುಂಡು ಜಾಗವನ್ನೂ ಸೇರಿ ಕ್ರಯಪತ್ರ ಮಾಡಿಕೊಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತಹಸಿಲ್ದಾರ್ ರಾಜಶೇಖರ್ ಹಾಗೂ ವ್ಯವಸ್ಥಾಪಕ ಸೋಮುಸುಂದ್ರ ಇಬ್ಬರನ್ನು ಸಸ್ಪೆಂಡ್ ಮಾಡಿತ್ತು. ಅಮಾನತ್ತನ್ನ ಪ್ರಶ್ನಿಸಿ ಇವರಿಬ್ಬರೂ ತಡೆಯಾಜ್ಞೆ ತಂದಿದ್ದಾರೆ. ಆದರೆ, ಇನ್ನೂ ಇಲಾಖಾ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣವಾಗುವವರೆಗೆ ಈ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಹಿವಾಟು ನಡೆಸಬಾರದು ಎಂದು ಮಹಾನಗರ ಪಾಲಿಕೆ ವಲಯ ಕಚೇರಿ ೪ರ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

 

Tags:
error: Content is protected !!