Mysore
22
clear sky

Social Media

ಬುಧವಾರ, 21 ಜನವರಿ 2026
Light
Dark

ಓದುಗರ ಪತ್ರ:  ಇಂದು ಮಕ್ಕಳು ಸಂಭ್ರಮಿಸುವ ದಿನ

ಓದುಗರ ಪತ್ರ

ನ.14 ರಂದು ದೇಶದ ಮೊದಲದ ಪ್ರಧಾನಿ ಪಂ. ಜವಾಹರ್‌ಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಮಕ್ಕಳಿಗೆ ರಜಾ ದಿನವಲ್ಲ ಆದರೂ ಸಂಭ್ರಮಾಚರಣೆಯ ದಿನವಾಗಿದೆ. ನ.14ರಂದು ಮೈಸೂರು ಮೃಗಾಲಯ, ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಉಚಿತ ಪ್ರವೇಶವಿರುತ್ತದೆ.

ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಮಕ್ಕಳು ಹುಲಿ, ಸಿಂಹ, ಆನೆ, ಚಿರತೆ, ಜಿರಾ- ಮೊದಲಾದ ಪ್ರಾಣಿಗಳನ್ನು ಕಂಡು ಸಂಭ್ರಮಿಸುತ್ತಾರೆ. ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಭೇಟಿ ನೀಡಿ ಸಂಭ್ರಮಿಸುತ್ತಾರೆ. ಬಣ ಬಣ್ಣದ ಸಮವಸ್ತ್ರಗಳಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಗುವ ಈ ಮಕ್ಕಳ ನಗು ಮತ್ತು ಸಂಭ್ರಮವು ತುಂಬಿರುತ್ತದೆ. ನ. ೧೪ ನಮ್ಮ ದೇಶದ ಭಾವಿ ಪ್ರಜೆಗಳಾದ ಮಕ್ಕಳ ಆನಂದಕ್ಕೆ ಮೀಸಲಾದ ಒಂದು ಸುಂದರವಾದ ಹಬ್ಬ.

-ಬಿ.ಗಣೇಶ, ಕೆ.ಜಿ.ಕೊಪ್ಪಲು,ಮೈಸೂರು

Tags:
error: Content is protected !!