Mysore
27
clear sky

Social Media

ಗುರುವಾರ, 22 ಜನವರಿ 2026
Light
Dark

ಓದುಗರ ಪತ್ರ: ರೂಪಾನಗರ ಬಡಾವಣೆಯಲ್ಲಿ ಮೂಲ ಸೌಕರ್ಯ ಕಲ್ಪಿಸಿ

ಓದುಗರ ಪತ್ರ

ಮೈಸೂರಿನ ರೂಪಾನಗರ ಬಡಾವಣೆಯಲ್ಲಿ ರಸ್ತೆ, ಬೀದಿ ದೀಪ ಮೊದಲಾದ ಮೂಲ ಸೌಕರ್ಯಗಳಿಲ್ಲದೇ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ರಸ್ತೆಗಳು ತೀರಾ ಹದಗೆಟ್ಟಿದ್ದುಸಾರ್ವಜನಿಕರು ಹರ ಸಾಹಸಪಡುವಂತಾಗಿದೆ. ಬೀದಿ ದೀಪಗಳು ಕೆಟ್ಟಿದ್ದು ತಿಂಗಳುಗಳು ಕಳೆದರೂ ಸಂಬಂಧಪಟ್ಟವರು ಸರಿಪಡಿಸಿಲ್ಲ.

ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಹಾವು, ಚೇಳುಗಳ ಆವಾಸ ಸ್ಥಾನವಾಗಿದ್ದು, ಸಾರ್ವಜನಿಕರು ರಾತ್ರಿಯ ವೇಳೆ ಮನೆಯಿಂದ ಹೊರಬರಲು ಹೆದರುವಂತಾಗಿದೆ. ಬೋಗಾದಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕೂಡಲೇ ಈ ಬಡಾವಣೆಗೆ ರಸ್ತೆ, ಬೀದಿ ದೀಪ ಮೊದಲಾದ ಮೂಲ ಸೌಕರ್ಯವನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಖಾಲಿ ನಿವೇಶನಗಳಲ್ಲಿ ಬೆಳದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.

– ಎಚ್.ಆರ್.ಜಯಂತಿ, ರೂಪಾ ನಗರ, ಮೈಸೂರು

Tags:
error: Content is protected !!