Mysore
22
light rain

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಓದುಗರ ಪತ್ರ:  ಬುದ್ಧನ ವಿಗ್ರಹ, ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿರುವುದು ಖಂಡನೀಯ

ಓದುಗರ ಪತ್ರ

ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಬುದ್ಧನ ಮೂರ್ತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ವಿರೂಪಗೊಳಿಸಿರುವುದು ಖಂಡನೀಯ. ಮಹನೀಯರ ಪ್ರತಿಮೆ, ಪುತ್ತಳಿ ಹಾಗೂ ಭಾವಚಿತ್ರಗಳಿಗೆ ಅಪಮಾನವೆಸಗುವ ವಿಕೃತ ಮನಸ್ಸಿನವರ ದುಷ್ಕೃತ್ಯಗಳಿಂದ ಸಮಾಜzಲ್ಲಿ ಸಾಮರಸ್ಯ ಹಾಳಾಗುತ್ತಿದೆ. ಈ ಕೃತ್ಯ ಎಸೆಗಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕು. ರಾಜ್ಯಾದ್ಯಂತ ನಿರ್ಮಿಸಿರುವ ಹಲವು ಮಹನೀಯರ ಪುತ್ತಳಿ ಪ್ರತಿಮೆ ಎದುರು ಸಿಸಿ ಕ್ಯಾಮೆರಾವನ್ನು ಅಳವಡಿಸಿ ಜಿಯೋ ಟ್ಯಾಗಿಂಗ್ ವ್ಯವಸ್ಥೆ ಕಲ್ಪಿಸಿ ಅದರ ಉಸ್ತುವಾರಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ವಹಿಸುವುದು ಸೂಕ್ತ.

 – ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ.ಕೋಟೆ ತಾ

Tags:
error: Content is protected !!