Mysore
13
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಓದುಗರ ಪತ್ರ: ಇಎಸ್‌ಐಸಿ ವೈದ್ಯಕೀಯ ಕಾಲೇಜುಗಳಲ್ಲಿ ಐಪಿ ಕೋಟಾ ಹೆಚ್ಚಿಸಿ

ಓದುಗರ ಪತ್ರ

ದೇಶದಲ್ಲಿ ಪ್ರಸ್ತುತ ಇಎಸ್‌ಐಸಿ ವೈದ್ಯಕೀಯ ಕಾಲೇಜುಗಳಲ್ಲಿ ಇನ್ಶೂರೆಡ್ ಪರ್ಸನ್ (ಐಪಿ) ಕೋಟಾ ಪ್ರಮಾಣ ಕೇವಲ ೩೫% ರಷ್ಟೇ ಇದೆ. ಇಎಸ್‌ಐ ಯೋಜನೆಯು ದೇಶದಾದ್ಯಂತ ಲಕ್ಷಾಂತರ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡಿರುವುದರಿಂದ, ಈ ಪ್ರಮಾಣವು ಅತೀ ಕಡಿಮೆಯಾಗಿದೆ.

ಇಎಸ್‌ಐ ಯೋಜನೆಗೆ ಕಾರ್ಮಿಕರು ತಮ್ಮ ಮಾಸಿಕ ವೇತನದ ಒಂದು ಭಾಗವನ್ನು ಪಾವತಿಸುವ ಮೂಲಕ ನೇರವಾಗಿ ಕೊಡುಗೆ ನೀಡುತ್ತಾರೆ. ಆದ್ದರಿಂದ, ಅವರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದ ಹೆಚ್ಚಿನ ಅವಕಾಶ ಒದಗಿಸುವುದು ನ್ಯಾಯಯುತ ಹಾಗೂ ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ಅತ್ಯಗತ್ಯ. ಇದೇ ವೇಳೆ, ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಮಿಕ ವರ್ಗದ ಮಕ್ಕಳ ಪ್ರತಿನಿಽತ್ವ ಅತ್ಯಲ್ಪವಾಗಿರುವುದು ಬೇಸರದ ಸಂಗತಿಯಾಗಿದೆ.

ಪ್ರಸ್ತುತ ಇರುವ ಐಪಿ ಕೋಟಾವನ್ನು ೩೫%ರಿಂದ ಕನಿಷ್ಠ ೪೫% ರಷ್ಟು ಹೆಚ್ಚಿಸುವುದು ಸಮಯೋಚಿತ ಮತ್ತು ನ್ಯಾಯಸಮ್ಮತವಾದ ಕ್ರಮವಾಗುತ್ತದೆ. ಇದು ಕಾರ್ಮಿಕ ಕುಟುಂಬಗಳ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದ್ದು, ವೈದ್ಯಕೀಯ ಶಿಕ್ಷಣದಲ್ಲಿ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದ ಆದರ್ಶವನ್ನು ಬೆಂಬಲಿಸುತ್ತದೆ. ಹೀಗಾಗಿ, ಕೇಂದ್ರ ಸರ್ಕಾರ ಮತ್ತು ಇಎಸ್‌ಐಸಿ ಆಡಳಿತ ಮಂಡಳಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಐಪಿ ಕೋಟಾ ಪ್ರಮಾಣವನ್ನು ಹೆಚ್ಚಿಸುವ ಕ್ರಮ ಕೈಗೊಳ್ಳುವುದು ಅತ್ಯಗತ್ಯ.

– ಡಾ. ಎಚ್. ಕೆ. ವಿಜಯಕುಮಾರ್, ಬೆಂಗಳೂರು

Tags:
error: Content is protected !!