Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕಾವೇರಿ ಸೇರಿದಂತೆ ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ: ಆಘಾತಕಾರಿ ವರದಿ ಬಹಿರಂಗ

KRS releases water to canals

ಬೆಂಗಳೂರು: ಕಾವೇರಿ ಸೇರಿದಂತೆ ರಾಜ್ಯದ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಆಘಾತಕಾರಿ ವರದಿಯನ್ನು ಬಹಿರಂಗಗೊಳಿಸಿದೆ.

12 ನದಿಗಳ ನೀರನ್ನು 32 ಕಡೆ ಪರಿಶೀಲನೆ ನಡೆಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನದಿಗಳ ನೀರಿನಲ್ಲಿ ಆಮ್ಲಜನಕ ಕೊರತೆ ಇದೆ ಎಂದು ವರದಿ ನೀಡಿದೆ.

ಇನ್ನು ಪರೀಕ್ಷೆಗೆ ಒಳಪಟ್ಟ 12 ನದಿಗಳಲ್ಲಿ ಒಂದೇ ಒಂದು ನದಿಗೂ ಎ ದರ್ಜೆ ಸಿಕ್ಕಿಲ್ಲ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ನದಿಗಳ ನೀರಿನ ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಜೀವನದಿ ಕಾವೇರಿ ಸೇರಿದಂತೆ ಪ್ರಮುಖ ನದಿಗಳ ನೀರಿನಲ್ಲಿ ಆಮ್ಲಜನಕ ಕೊರತೆಯಿದೆ. ನದಿಗಳ ನೀರು ಕಲುಷಿತವಾಗಿದೆ. 12 ನದಿಗಳ ಪೈಕಿ ನೇತ್ರಾವತಿ ನದಿಗೆ ಮಾತ್ರ ಬಿ ದರ್ಜೆ ಸಿಕ್ಕಿದೆ. ಇದನ್ನು ಸ್ನಾನ ಹಾಗೂ ಗೃಹಬಳಕೆಗೆ ಉಪಯೋಗಿಸಬಹುದಾಗಿದೆ.

ಲಕ್ಷ್ಮಣತೀರ್ಥ, ತುಂಗಭದ್ರಾ, ಕಾವೇರಿ, ಕಬಿನಿ, ಶಿಂಷಾ, ಕೃಷ್ಣಾ ನದಿಗೆ ಸಿ ದರ್ಜೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ. ಭೀಮಾನದಿ, ಕಾಗಿಣಾ ಹಾಗೂ ಅರ್ಕಾವತಿ ನದಿಗಳಿಗೆ ಡಿ ದರ್ಜೆ ನೀಡಲಾಗಿದೆ.

 

Tags:
error: Content is protected !!