ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದು, ಪೋಷಕರಿಗೆ ನಮ್ಮ ಮಕ್ಕಳಿಗೆ ಸುರಕ್ಷಿತವಾದ ಜಾಗ ಯಾವುದು ಎಂದು ಚಿಂತೆ ಕಾಡುತ್ತಿದೆ. ಮಕ್ಕಳ ಮೇಲೆ ಅತ್ಯಾಚಾರವಾ ದಾಗ ಮಕ್ಕಳು ಗಾಬರಿಗೊಂಡಿರುತ್ತಾರೆ. ಮನಸ್ಸಿಗೆ ತುಂಬಾ ಘಾಸಿಯಾಗಿರುತ್ತದೆ.
ಇಂತಹ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು, ಪೊಲೀಸರು, ವಕೀಲರು ಹಾಗೂ ವೈದ್ಯರು ನೂರಾರು ಪ್ರಶ್ನೆಗಳನ್ನು ಕೇಳುವುದು ಸಮಂಜಸವಲ್ಲ. ಎಲ್ಲರೂ ಮುಗಿಬಿದ್ದರೆ ಸಂತ್ರಸ್ತೆ ನೀಡುವ ಹೇಳಿಕೆಗಳು ಬದಲಾಗಬಹುದು, ಆ ಹೇಳಿಕೆ ತಪ್ಪಿಗೂ ಕಾರಣವಾಗಬಹುದು. ಸಂತ್ರಸ್ತೆ ಕೋರ್ಟಿನ ಕಟಕಟೆಯಲ್ಲಿ ಸಂತ್ರಸ್ತೆಯನ್ನು ನಿಲ್ಲಿಸಿ ಪದೇ ಪದೇ ಪ್ರಶ್ನೆ ಕೇಳುವ ಮೂಲಕ ಗಾಬರಿಗೊಳಿಸುವುದು ಬೇಡ. ಸಂತ್ರಸ್ತೆಗೆ ಕೇಳಲಾದ ಪ್ರಶ್ನೆ ಹಾಗೂ ಆಕೆ ನೀಡುವ ಉತ್ತರಗಳನ್ನು ಧ್ವನಿ ಮುದ್ರಿಸಿಕೊಂಡು ಸಂಬಂಧಪಟ್ಟವರಿಗೆ ಕಳುಹಿಸಿದರೆ ಸಂತ್ರಸ್ತೆಯನ್ನು ಪದೇ ಪದೇ ಪ್ರಶ್ನೆ ಕೇಳುವುದು ತಪ್ಪಿದಂತಾಗುತ್ತದೆ. ಹೇಳಿಕೆಗಳೂ ಒಂದೇ ತೆರ ನಾಗಿರುತ್ತವೆ.
-ಎಂ. ಎಸ್. ಉಷಾ ಪ್ರಕಾಶ್, ಎಸ್. ಬಿ.ಎಂ.ಕಾಲೋನಿ, ಮೈಸೂರು





