Mysore
16
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಓದುಗರ ಪತ್ರ: ಕರೂರು ದುರಂತ; ರಾಜಕಾರಣಿಗಳಿಗೆ ಪಾಠವಾಗಲಿ

ಓದುಗರ ಪತ್ರ

ಕರೂರಿನಲ್ಲಿ ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಮತ್ತು ನಟ ವಿಜಯ್ ಅವರು ಹಮಿಕೊಂಡಿದ್ದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ದೇಶದ ಜನತೆಯನ್ನು ಆಘಾತಕ್ಕೀಡುಮಾಡಿದೆ. ಇದು ಕೇವಲ ಒಂದು ದುಃಖಕರ ಘಟನೆ ಮಾತ್ರವಲ್ಲ ಜನಸಮೂಹ ನಿರ್ವಹಣೆಯಲ್ಲಿ ಕಂಡುಬಂದ ಗಂಭೀರ ಲೋಪವಾಗಿದೆ. ಈ ಸಮಾವೇಶವನ್ನು ನಿರ್ವಹಿಸಬೇಕಿತ್ತು ಅಷ್ಟೇ ಹೊಣೆಗಾರಿಕೆಯಿಂದ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಬೇಕಿತ್ತು. ದೊಡ್ಡ ಜನಸಮೂಹವು ಕೇವಲ ಸಂಖ್ಯೆಗಳಲ್ಲ, ಅದು ಜೀವಗಳು, ಕುಟುಂಬಗಳು ಮತ್ತು ಭವಿಷ್ಯದ ಸಂಕೇತ. ಅದನ್ನು ಸಮರ್ಪಕವಾಗಿ ಕಾಯುವುದು ಕಾರ್ಯಕ್ರಮ ಆಯೋಜಕರು ಹಾಗೂ ಆಡಳಿತದ ಕರ್ತವ್ಯ.

ಈ ದುರ್ಘಟನೆಯಲ್ಲಿ ಮಕ್ಕಳೂ ಬಲಿಯಾದದ್ದು ಹೃದಯವಿದ್ರಾವಕ. “ಜನರನ್ನು ಸೆಳೆಯುವುದು ಸುಲಭ, ಆದರೆ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ನಿಜವಾದ ನಾಯಕತ್ವ” ಎಂಬ ಮಾತು ಎಲ್ಲ ನಾಯಕರಿಗೂ ಮಾರ್ಗದರ್ಶಿಯಾಗಬೇಕು. ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಕಟ್ಟುನಿಟ್ಟಾದ ಜನಸಮೂಹ ನಿಯಂತ್ರಣ, ಮುನ್ನೆಚ್ಚರಿಕಾ ಕ್ರಮಗಳು ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಖಚಿತಪಡಿಸಬೇಕು. ಸುರಕ್ಷತಾ ಮಾರ್ಗಸೂಚಿಗಳ ಆಧಾರದ ಮೇಲೆ ಕಾರ್ಯಕ್ರಮಗಳು ನಡೆಯುವಂತಾಗಬೇಕು. ಕರೂರು ದುರಂತವು ಇನ್ನು ಮುಂದೆ ದೇಶದಲ್ಲಿ ನಡೆಯುವ ರಾಜಕೀಯ ಸಮಾವೇಶಗಳಿಗೆ ಎಚ್ಚರಿಕೆಯ ಪಾಠವಾಗಲಿ.

-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು.

Tags:
error: Content is protected !!