Mysore
15
scattered clouds

Social Media

ಬುಧವಾರ, 21 ಜನವರಿ 2026
Light
Dark

ಮೈಸೂರು ದಸರಾ | ನಾಡು, ನುಡಿಯ ಮಹತ್ವ ಸಾರಿದ ಯುವ ಸಂಭ್ರಮ

ಮೈಸೂರು : ದಸರಾ ದಿನದಿಂದ ದಿನಕ್ಕೆ ಕಳೆಗಟ್ಟಿದೆ. ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಎರಡನೇ ದಿನದ ಯುವ ಸಂಭ್ರಮ ನಾಡು, ನುಡಿಯ ಸಂಭ್ರಮವನ್ನು ತೆರೆದಿಡುವ ಪ್ರಯತ್ನ ಮಾಡಿತು.

ವಿವೇಕಾನಂದ ಪ್ರಿಯುನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿಗಳು, ಕನ್ನಡ ನಾಡು ನುಡಿ ನೃತ್ಯಕ್ಕೆ ಹೆಜ್ಜೆ ಹಾಕಿ ಕನ್ನಡ ನಾಡು ನುಡಿಯ ಸೋಬಗನ್ನು ತೆರೆದಿಟ್ಟರು. ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿ ನೃತ್ಯ ಪ್ರದರ್ಶನ ಮಾಡಿ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುವಂತೆ ಮಾಡಿದರು.

ಮೈಸೂರಿನ ಶ್ರೀಕಂಠೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಮೊಬೈಲ್ ಬಳಕೆ ಹಾಗೂ ಯುವಕರ ನಡಿಗೆ ಪುಸ್ತಕದ ಕಡೆಗೆ ಎಂಬ ನೃತ್ಯ ಪ್ರದರ್ಶಿಸಿ ಯುವಕರಲ್ಲಿ ಅರಿವು ಮೂಡಿಸುವ ಸಲುವಾಗಿ ಹೆಜ್ಜೆ ಹಾಕಿದರು, ಶ್ರೀ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ತಂಡ ಸಮಾನತೆಯೊಂದಿಗೆ ಮಹಿಳಾ ಸಬಲೀಕರಣ ನೃತ್ಯ ಕುರಿತಾದ ನೃತ್ಯವನ್ನು ಪ್ರದರ್ಶಿಸಿದರು ಹೆಣ್ಣಿನ ಮಹತ್ವ ಸಾರಿದರು.

ಮೈಸೂರಿನ ಎಸ್.ಎನ್.ಜಿ.ಯು ಕಾಲೇಜ್ ಕಾರಣಕುಪ್ಪೆ ತಂಡದ ಅರ್ಜುನ ಆನೆ ಕುರಿತು ಮಾಡಿದ ನೃತ್ಯ ಪ್ರದರ್ಶನವೂ ಅರ್ಜುನ ಆನೆಯನ್ನು ನೆನೆಯುವಂತೆ ಮಾಡಿತು, ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ತಂಡವು ವಿದ್ಯಾರ್ಥಿಗಳು ಆತ್ಮಹತ್ಯೆ ಬಗ್ಗೆ ಕುರಿತು ಯುವಕರಿಗೆ ಪ್ರದರ್ಶನದ ಮೂಲಕ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ 58 ನೃತ್ಯ ‌ಪ್ರದರ್ಶನವನ್ನು ಮಾಡಲಾಯಿತು. ಮೈಥಾಲಜಿ, ನಶಮುಕ್ತ ಭಾರತ, ಕನ್ನಡ ವೈಭವ, ಶಾಸ್ತ್ರೀಯ ಕಲೆಗಳು, ಇತಿಹಾಸ ಪೌರಾಣಿಕ, ವಿಶೇಷ ಚೇತನರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ, ಭಾರತೀಯ ಯೋಧರ ಪಾತ್ರ, ರಾಷ್ಟ್ರೀಯ ಭಾವ್ಯಕ್ಯತೆ, ಪರಿಸರ ಸಂರಕ್ಷಣೆ, ಮೈಸೂರು ಮಹಾರಾಜರ ಕೊಡುಗೆ ಸೇರಿದಂತೆ ವಿವಿಧ ಥೀಮ್ ಗಳಿಗೆ ಕಾಲೇಜು ವಿದ್ಯಾರ್ಥಿಗಳು ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.

Tags:
error: Content is protected !!