Mysore
25
scattered clouds

Social Media

ಮಂಗಳವಾರ, 27 ಜನವರಿ 2026
Light
Dark

ಇಡಿ ಅಧಿಕಾರಿಗಳಿಂದ ಕಾರವಾರ ಶಾಸಕ ಸತೀಶ್ ಸೈಲ್‌ ಬಂಧನ

ಬೆಂಗಳೂರು: ವಿದೇಶಕ್ಕೆ ಕಾನೂನುಬಾಹಿರವಾಗಿ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಇಂದು ಜಾರಿ ನಿರ್ದೇಶನಾಲಯ (ಇ.ಡಿ)ಅಧಿಕಾರಿಗಳು ಬಂಧಿಸಿದ್ದಾರೆ.

ವಿಚಾರಣೆಗೆ ಪದೇ ಪದೇ ಗೈರು ಹಾಜರಾದ ಹಿನ್ನೆಲೆಯಲ್ಲಿ ಸತೀಶ್ ಸೈಲ್ ಅವರನ್ನು ಬೆಂಗಳೂರಿನಲ್ಲಿ ಇಡೀ ಅಧಿಕಾರಿಗಳು ಬಂಧಿಸಲಾಗಿದೆ.

ಕಳೆದ ಆಗಸ್ಟ್ 13 ಮತ್ತು 14ರಂದು ಇಡೀ ಅಧಿಕಾರಿಗಳು ಬೆಂಗಳೂರು ಕಾರವಾರ ಸೇರಿದಂತೆ ಮತ್ತಿತರ ಕಡೆ ಸತೀಶ್ ಸೈಲ್‌ಗೆ ಸೇರಿದ ಮನೆ ಕಚೇರಿ ಮತ್ತಿತರ ಕಡೆ ದಾಳಿ ನಡೆಸಿ ನಗದು ಸೇರಿದಂತೆ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕೆಂದು ಇಡಿ ಅಧಿಕಾರಿಗಳು ಅವರಿಗೆ ನೋಟಿಸ್ ಕೊಟ್ಟಿದ್ದರೂ ಗೈರುಹಾಜರಾಗಿದ್ದರು.

ಇಂದು ಬೆಂಗಳೂರಿನಲ್ಲಿ ತಂಗಿದ್ದ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.

ಬಂಧನದ ನಂತರ ಅವರನ್ನು ಅಧಿಕಾರಿಗಳು ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಗಜಾನನ ಭಟ್ ಅವರ ಕೋಗಿಲು ಕ್ರಾಸ್ ನಲ್ಲಿರುವ ನಿವಾಸಕ್ಕೆ ಕರೆತಂದು ಹಾಜರುಪಡಿಸಿದರು.

ಇದಕ್ಕೂ ಮುನ್ನ ಅವರುಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಡೆಸಲಾಯಿತು.

ಉತ್ತರ ಕನ್ನಡದ ಶಾಸಕ ಸತೀಶ್ ಸೈಲ್ ಅವರ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ಆ.14ರಂದು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಕೋಟ್ಯಂತರ ಹಣ, ಕೆಜಿಗಟ್ಟಲೆ ಚಿನ್ನ ಪತ್ತೆಯಾಗಿದೆ. ಆ ಸಂದರ್ಭದಲ್ಲಿ ಸತೀಶ್ ಸೈಲ್ ಮನೆಯಲ್ಲಿರಲಿಲ್ಲ. ವಿಧಾನಸಭಾ ಅಧಿವೇಶನ ನಡೆಯುತ್ತಿರುವುದರಿಂದ ಅವರು ಬೆಂಗಳೂರಿನಲ್ಲಿದ್ದರು. ದಿನವಿಡೀ ಮನೆಯನ್ನು ಜಾಲಾಡಿರುವ ಅಧಿಕಾರಿಗಳು, ಕೈಗೆ ಸಿಕ್ಕ ಹಣ, ಚಿನ್ನವನ್ನು ಜಪ್ತಿ ಮಾಡಿದ್ದರು.

Tags:
error: Content is protected !!