Mysore
22
clear sky

Social Media

ಬುಧವಾರ, 28 ಜನವರಿ 2026
Light
Dark

ಓದುಗರ ಪತ್ರ: ಪೌರ ಕಾರ್ಮಿಕರನ್ನು ನಿಕೃಷ್ಟವಾಗಿ ಕಾಣದಿರಿ

ಓದುಗರ ಪತ್ರ

ನಮ್ಮ ನಗರಗಳನ್ನು ಸ್ವಚ್ಛವಾಗಿಡಲು ಮಳೆ, ಚಳಿಯನ್ನು ಲೆಕ್ಕಿಸದೆ ಪ್ರತಿದಿನ ಬೆಳಿಗ್ಗೆ ಮನೆಹತ್ತಿರ ಬರುವ ಪೌರಕಾರ್ಮಿಕರನ್ನು ನಾವುಗಳು ಕಸದವರು ಎಂದು ಕರೆಯುತ್ತೇವೆ.! ಆದರೆ, ನಿಜವಾಗಿಯೂ ಕಸದವರು ಯಾರು? ಕಸವನ್ನು ರಸ್ತೆ ಮೇಲೆ, ಮೋರಿಯಲ್ಲಿ, ಎಲ್ಲೆಂದರಲ್ಲಿ ಎಸೆದು, ಸುತ್ತಮುತ್ತಲಿನ ಪರಿಸರವನ್ನು ಕೊಳಕು ಮಾಡುವ ನಾವುಗಳು ನಿಜವಾದ ಕಸದವರು.

ಆ ಕಸವನ್ನು ಎತ್ತಿ, ನಮ್ಮ ನಗರವನ್ನು ಸ್ವಚ್ಛವಾಗಿಸಿ, ಸುಂದರವಾಗಿಡಲು ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ದುಡಿಯುವವರು ಈ ಪೌರಕಾರ್ಮಿಕರು. ಹಾಗಾಗಿ, ಅವರನ್ನು ಕಸದವರು ಎಂದು ಕರೆಯುವುದು ಅವರುಗಳಿಗೆ ನಾವು ಮಾಡುವ ದೊಡ್ಡ ಅಪಮಾನ. ಬದಲಾಗಿ ನಾವು ಅವರನ್ನು ಸ್ವಚ್ಛತಾಗಾರರು ಎಂದು ಕರೆಯಬೇಕು. ಹಾಗೆಯೇ, ನಾಗರಿಕರಾದ ನಾವು ಅನಾಗರಿಕರ ರೀತಿ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತವಾಗಿ ಕಸ ವಿಲೇವಾರಿ ಮಾಡಲು ಅವರಿಗೆ ಸಹಕರಿಸಬೇಕು.

-ಬಿ.ಗಣೇಶ, ಕೆ.ಜಿ.ಕೊಪ್ಪಲು,ಮೈಸೂರು

Tags:
error: Content is protected !!