Mysore
28
few clouds

Social Media

ಬುಧವಾರ, 21 ಜನವರಿ 2026
Light
Dark

ಬ್ಯಾಂಕ್‌ ಉದ್ಯೋಗ | ಬರೋಬ್ಬರಿ 13 ಸಾವಿರಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಆಹ್ವಾನಿಸಿದ IBPS

ಬೆಂಗಳೂರು : ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಬರೋಬ್ಬರಿ 13,217 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಆಫೀಸ್‌ ಅಸಿಸ್ಟಂಟ್‌, ಆಫೀಸರ್‌ ಮುಂತಾದ ಖಾಲಿ ಇದ್ದು, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 21 ಆಗಿದ್ದು, ಹೆಚ್ಚಿನ ಮಾಹಿತಿ ಹೀಗಿದೆ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಆಫೀಸ್‌ ಅಸಿಸ್ಟಂಟ್‌-7,972 ಹುದ್ದೆ, ವಿದ್ಯಾರ್ಹತೆ: ದೇಶದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ

ಆಫೀಸರ್‌ ಸ್ಕೇಲ್‌-I (ಅಸಿಸ್ಟಂಟ್‌ ಮ್ಯಾನೇಜರ್‌)-3,907 ಹುದ್ದೆ, ವಿದ್ಯಾರ್ಹತೆ: ದೇಶದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ

ಆಫೀಸರ್‌ ಸ್ಕೇಲ್‌-II (ಮ್ಯಾನೇಜರ್‌)-1,139 ಹುದ್ದೆ, ವಿದ್ಯಾರ್ಹತೆ: ಸಿಎ, ಪದವಿ, ಎಲ್‌ಎಲ್‌ಬಿ, ಎಂಬಿಎ

ಆಫೀಸರ್‌ ಸ್ಕೇಲ್‌-III (ಸೀನಿಯರ್‌ ಮ್ಯಾನೇಜರ್‌)-199 ಹುದ್ದೆ, ವಿದ್ಯಾರ್ಹತೆ: ದೇಶದ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ

ವಯೋಮಿತಿ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಜನರಲ್‌ / ಒಬಿಸಿ / ಇಡಬ್ಲ್ಯುಎಸ್‌ ಅಭ್ಯರ್ಥಿಗಳು 850 ರೂ. ಮತ್ತು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಇಎಸ್‌ಎಂ / ಡಿಇಎಸ್‌ಎಂ ಅಭ್ಯರ್ಥಿಗಳು 175 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್‌.

ಆಯ್ಕೆ ವಿಧಾನ
ಪ್ರಿಲಿಮಿನರಿ ಪರೀಕ್ಷೆ, ಮೇನ್‌ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಪ್ರಿಲಿಮಿನರಿ ಪರೀಕ್ಷೆ ನವೆಂಬರ್‌ / ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಮೇನ್‌ ಪರೀಕ್ಷೆ ಡಿಸೆಂಬರ್‌ / ಫೆಬ್ರವರಿಯಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ https://ibps.in/ಗೆ ಭೇಟಿ ನೀಡಬಹುದು.

Tags:
error: Content is protected !!