ಬೆಂಗಳೂರು : ಧರ್ಮಸ್ಥಳ ಪ್ರಕರಣವನ್ನು ಎನ್.ಐ.ಎ ತನಿಖೆಗೆ ವಹಿಸುವಂತೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರಿಗೆ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಎನ್.ಐ.ಎ ತನಿಖೆ ಅವಶ್ಯಕತೆ ಇಲ್ಲ ಎಂದು ಬಿಜೆಪಿಯ ರೆಬಲ್ ಶಾಸಕ ಯತ್ನಾಳ್ ಹೇಳಿದ್ದಾರೆ.
ಇದನ್ನು ಓದಿ:ಮೊದಲು ಮುಸುಕುಧಾರಿಗೆ ಮಂಪರು ಪರೀಕ್ಷೆ ಆಗಬೇಕು: ಶಾಸಕ ತನ್ವೀರ್ ಸೇಠ್
ಪ್ರಕರಣ ಸಂಬಂಧ ಎಸ್.ಐ.ಟಿ ತನಿಖೆ ಮಾಡುತ್ತಿದೆ ಧರ್ಮಸ್ಥಳದಲ್ಲಿ ಎಸ್.ಐ.ಟಿ ತನಿಖೆಯಲ್ಲಿ ಏನು ಸಿಕ್ಕಿಲ್ಲ. ಎಲ್ಲಾ ಮುಗಿದ ಮೇಲೆ ಬಿ.ವೈ ವಿಜಯೇಂದ್ರ ಹೋಗಿ ಎನ್ ಮಾಡುತ್ತಾರೆ ಸುಖಾಸುಮ್ಮನೆ ರಾಜಕೀಯ ಮಾಡೋದು ಬೇಡ ಎಂದು ಯತ್ನಾಳ್ ತಿಳಿಸಿದ್ದಾರೆ.





