Mysore
28
scattered clouds

Social Media

ಭಾನುವಾರ, 25 ಜನವರಿ 2026
Light
Dark

ಮತ್ತೆ ಸೆನ್ಸಾರ್ ಮಂಡಳಿ ಬಗ್ಗೆ ರವಿ ಶ್ರೀವತ್ಸ ಮುನಿಸು

‘ಡೆಡ್ಲಿ ಸೋಮ’, ‘ಮಾದೇಶ’ ಖ್ಯಾತಿಯ ರವಿ ಶ್ರೀವತ್ಸ ನಿರ್ಮಿಸಿ-ನಿರ್ದೇಶಿಸಿರುವ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ನಟ-ನಿರ್ದೇಶಕ ಉಪೇಂದ್ರ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ ನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ರವಿ ಶ್ರೀವತ್ಸ ಅವರು ಕಥೆಗಾರ ಎಂ.ಎಸ್‌. ರಮೇಶ್ ಜೊತೆಗೂಡಿ ಈ ಚಿತ್ರಕ್ಕೆ ಚಿತರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿದ್ದಾರೆ. ಭೀಮೆಯ ಮಡಿಲಲ್ಲಿ ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ.

ಇದನ್ನು ಓದಿ: ಡಿಕೆಶಿ ಅವರ ನಟ್ಟುಬೋಲ್ಟು ಟೈಟ್‌ ಹೇಳಿಕೆ : ಮೌನ ಮುರಿದ ನಟ ಕಿಚ್ಚ ಸುದೀಪ್‌ ಹೇಳಿದ್ದೇನು?

ಈ ಚಿತ್ರದಲ್ಲಿ ಹಿಂಸೆ ಜಾಸ್ತಿ ಇದೆ ಎಂಬ ಕಾರಣ ನೀಡಿ, ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರವನ್ನು ಬ್ಯಾನ್‍ ಮಾಡಿತ್ತಂತೆ. ಈ ಹಿಂದೆಯೂ ರವಿ ಶ್ರೀವತ್ಸ ನಿರ್ದೇಶನದ ಕೆಲವು ಚಿತ್ರಗಳನ್ನು ಸೆನ್ಸಾರ್ ಮಂಡಳಿ ಬ್ಯಾನ್‍ ಮಾಡಿತ್ತು. ಕೊನೆಗೆ ರಿವೈಸಿಂಗ್‍ ಕಮಿಟಿಯಲ್ಲಿ ಚಿತ್ರದ ಪ್ರದರ್ಶನಕ್ಕೆ ಅನುಮತಿ ಸಿಕ್ಕಿತ್ತು. ಅದು ಈ ಚಿತ್ರದಲ್ಲೂ ಮುಂದುವರೆದಿದೆ.

ಈ ಕುರಿತು ಮಾತನಾಡುವ ರವಿ ಶ್ರೀವತ್ಸ, ‘ಚಿತ್ರದಲ್ಲಿ ಹಿಂಸೆ ಜಾಸ್ತಿ ಇದೆ ಎಂಬ ಕಾರಣ ನೀಡಿ ಪ್ರಾದೇಶಿಕ ಸೆನ್ಸಾರ್ ಮಂಡಳಿ ನಮ್ಮ ಚಿತ್ರವನ್ನು ಬ್ಯಾನ್ ಮಾಡಿದ್ದಲ್ಲದೆ, ರಿವೈಸಿಂಗ್‍ ಕಮಿಟಿಗೆ ಹೋಗಿ ಸೆನ್ಸಾರ್ ಮಾಡಿಸಿಕೊಳ್ಳಿ ಎಂದರು. ನಂತರ ರಿವೈಸಿಂಗ್ ಕಮಿಟಿಗೆ ಹೋಗಿ ಚಿತ್ರವನ್ನು ಸೆನ್ಸಾರ್ ಮಾಡಿಸಿಕೊಂಡಿದ್ದಾಗಿ’ ವಿವರಿಸಿದರು.

‘ಗ್ಯಾಂಗ್ಸ್ ಆಫ್‍ ಯು.ಕೆ’ ಚಿತ್ರದಲ್ಲಿ ‘ಒರಟ’ ಪ್ರಶಾಂತ್, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ, ಮುನಿ ಅಲ್ಲದೆ ಕೆವಿ‌.ರಾಜು ಅವರ ಪುತ್ರ ಅಮೋಘ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Tags:
error: Content is protected !!