ಮೈಸೂರು: ಭಾರತದ ಎಲ್ಲಾ ರಾಜ್ಯಗಳಿಗೂ ಮೈಸೂರಿನಿಂದ ರೈಲು ಓಡಿಸುವ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಷ್ಟೇ ಮೈಸೂರಿಗೂ ಆದ್ಯತೆ ನೀಡಲಾಗುವುದು. ವಂದೇ ಭಾರತ್ ಹೆಚ್ಚಿನ ಟ್ರೈನ್‌ಗಳನ್ನು ಓಡಿಸಲಾಗುವುದು. ಒಟ್ಟಾರೆಯಾಗಿ ಭಾರತದ ಎಲ್ಲಾ ರಾಜ್ಯಗಳಿಗೂ ಮೈಸೂರಿನಿಂದ ರೈಲು ಓಡಿಸುವ ಯೋಜನೆ ಪ್ರಾರಂಭಿಸಲಾಗುವುದು ಎಂದರು.
ಇನ್ನು ನಂಜನಗೂಡು ಭಾಗದಲ್ಲಿ ಸೇತುವೆಗಳ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಧಿಕಾರಿಗಳು, ಜನಪ್ರತಿನಿಧಿಗಳ ನಡುವೆ ಗೊಂದಲವಿದೆ. ಆ ಕಾರಣಕ್ಕೆ ನಾನೇ ಖುದ್ದು ನಂಜನಗೂಡಿಗೆ ತೆರಳುತ್ತಿರುವೆ ಎಂದು ಹೇಳಿದರು.
ಇದನ್ನು ಓದಿ: ಧರ್ಮಸ್ಥಳ ಪ್ರಕರಣ: ಅಮಿತ್ ಶಾ ಭೇಟಿಯಾದ ಸ್ವಾಮೀಜಿಗಳ ನಿಯೋಗ
ಇನ್ನು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್.15ರಂದು ಮಾತನಾಡಿದ್ದರು. ವಿತ್ತ ಸಚಿವರು ಜಿಎಎಸ್‌ಟಿ ವಿಚಾರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದಸರಾ, ದೀಪಾವಳಿಗೆ ರಾಜ್ಯಕ್ಕೆ ಒಳ್ಳೆಯ ಗಿಫ್ಟ್ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಬಿಹಾರದ ಎಲೆಕ್ಷನ್ ಇರುವ ಕಾರಣ ಈಗ ಅಭಿವೃದ್ದಿ ಮಾಡ್ತಾರೆ ಎಂಬುದು ಸುಳ್ಳು. ನಾವು ನಿರಂತರ ಅಭಿವೃದ್ಧಿ ಕೆಲಸದಲ್ಲಿ ತೊಡಗಿದ್ದೇವೆ. ತುಮಕೂರಿನಲ್ಲಿ 50 ವರ್ಷಕ್ಕೆ ಬೇಕಾಗುವಷ್ಟು ಕೆಲಸ ತಂದಿದ್ದೇವೆ. ಆ ಕಾರಣಕ್ಕೆ ಪುನಃ ಅಲ್ಲಿ ಚುನಾವಣೆಗೆ ನಿಲ್ಲಲ್ಲ ಎಂದಿರುವೆ ಅಷ್ಟೆ. ಅದು ಬಿಟ್ಟರೆ ಬೇರೂ ಏನೂ ಇಲ್ಲ ಎಂದರು.





