Mysore
15
few clouds

Social Media

ಬುಧವಾರ, 21 ಜನವರಿ 2026
Light
Dark

ಸೂರ್ಯ, ಚಂದ್ರ ಎರಡೂ ಅದರ ಜಾಗದಲ್ಲಿದ್ದರೆ ಚೆನ್ನ: ಸುದೀಪ್‍

darshan and sudeep

ಕಳೆದ ವರ್ಷ ದರ್ಶನ್‍ ಬಂಧನವಾದ ನಂತರ ಸುದೀಪ್‍ ಮಾತನಾಡಿದ್ದರು. ತಮಗೆ ಕಾನೂನು, ಸರ್ಕಾರದ ಮೇಲೆ ನಂಬಿಕೆಯಿದೆ, ಆಗಬೇಕಾಗಿರೋದು ಆಗಿಯೇ ಆಗುತ್ತದೆ ಎಂದಿದ್ದರು. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ಹಿನ್ನೆಲೆಯಲ್ಲಿ ನಟ ದರ್ಶನ್‍, ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ವಿಷಯವಾಗಿ ಸುದೀಪ್‍ ಮತ್ತೊಮ್ಮೆ ಕೆಲವು ವಿಷಯಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಅವರ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಇದನ್ನು ಓದಿ:ದರ್ಶನ್‌ಗೆ ಮತ್ತೆ ಜೈಲು: ಅಭಿಮಾನಿಗಳಲ್ಲಿ ತೀವ್ರ ಬೇಸರ

ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸುದೀಪ್, ‘ಅವರ ಸಿನಿಮಾಗೆ ಒಳ‍್ಳೆಯದಾಗಲಿ. ಅವರಿಗೆ ಅವರದ್ದೇ ಆದ ನೋವು ಇರುತ್ತದೆ. ಈ ವಿಷಯದಲ್ಲಿ ನಾವು ಮಾತನಾಡುವುದು ತಪ್ಪಾಗುತ್ತದೆ. ಸರ್ಕಾರ, ಕಾನೂನು ಅಂತ ಬಂದಾಗ ಅವರೇನು ಮಾಡಬೇಕು ಅದನ್ನ ಮಾಡುತ್ತಿದ್ದಾರೆ. ಅದಕ್ಕೂ ನಾವು ಅಡ್ಡಿ ಬರಬಾರದು. ಯಾರೂ ಕೈಕಟ್ಟಿಕೊಂಡು ಸುಮ್ಮನೇ ಕುಳಿತಿರುವುದಿಲ್ಲ. ಆದರೆ, ಕೆಲವೊಂದಕ್ಕೆ ನಾನು ತಲೆಹಾಕೋಕೆ ಹೋಗಲ್ಲ. ಏಕೆಂದರೆ, ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ. ಅದರಿಂದ ಅಂತರ ಜಾಸ್ತಿಯಾಗುತ್ತದೆ’ ಎಂದರು.

ಯಾರದ್ದೋ ಮಾತು ಕೇಳಿ ದೂರಾಗಿಲ್ಲ ಎಂದ ಸುದೀಪ್‍, ‘ನಾವೇನು ಚಿಕ್ಕವರಲ್ಲ, ನಾವು ದೂರಾಗಿದ್ದು ಯಾಕೆ ಅನ್ನೋದು ನಮಗೆ ಗೊತ್ತಿದೆ. ನಾವಿಬ್ಬರು ಯಾಕೆ ಮಾತಾಡುವುದಿಲ್ಲ ಎಂದರೆ ಅದಕ್ಕೆ ಕೆಲವು ಕಾರಣಗಳಿವೆ. ಯಾರೂ ಆ ಕಾರಣಗಳ ಬಗ್ಗೆ ಕೇಳಲ್ಲ. ಆದರೆ, ನಮಗೆ ಗೊತ್ತಿರುತ್ತದೆ. ಇನ್ನು, ಯಾರದ್ದೋ ಮಾತು ಕೇಳಿಕೊಂಡು ಹೀಗೆ ಮಾಡುವಷ್ಟು ನಾವು ಚಿಕ್ಕವರಲ್ಲ. ನಮಗೆ ಕೆಲವು ವಿಷಯಗಳು ಅರ್ಥ ಆಗುತ್ತವೆ. ನಾವ್ಯಾಕೆ ಹೀಗೀದ್ದೀವಿ ಎಂಬ ಸತ್ಯ ನಮಗೆ ಗೊತ್ತಿರುತ್ತದೆ. ಸೂರ್ಯ, ಚಂದ್ರ ಎರಡೂ ಅದರ ಜಾಗದಲ್ಲಿ ಇದ್ದರೆ ಚೆನ್ನ’ ಎಂದರು.

Tags:
error: Content is protected !!